alex Certify BIG NEWS: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಸುಜುಕಿ ಮೋಟಾರ್ 126 ಕೋಟಿ ರೂ. ಹೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಸುಜುಕಿ ಮೋಟಾರ್ 126 ಕೋಟಿ ರೂ. ಹೂಡಿಕೆ

ಟೋಕಿಯೊ: ಜಪಾನ್ ನ ಸುಜುಕಿ ಮೋಟಾರ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳನ್ನು ಉತ್ಪಾದಿಸಲು ಸುಮಾರು 150 ಬಿಲಿಯನ್ ಯೆನ್(1.26 ಶತಕೋಟಿ ಡಾಲರ್ ಅಥವಾ 126 ಕೋಟಿ ರೂ.) ಹೂಡಿಕೆ ಮಾಡಲು ಯೋಜಿಸಿದೆ ಎಂದು ಜಪಾನಿನ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿಡಾ ಅವರು ಶನಿವಾರ ಭಾರತಕ್ಕೆ ಭೇಟಿ ನೀಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. Nikkei ವ್ಯಾಪಾರ ದಿನಪತ್ರಿಕೆಯ ಪ್ರಕಾರ, ಕಿಶಿಡಾ ಪ್ರವಾಸದ ಸಮಯದಲ್ಲಿ ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ 5 ಟ್ರಿಲಿಯನ್ ಯೆನ್ ಹೂಡಿಕೆ ಮಾಡುವ ಸುಜುಕಿ ಯೋಜನೆಗಳ ಪ್ರಕಟಣೆ ಹೊರಬೀಳಲಿದೆ.

2025 ರ ಹೊತ್ತಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಗುರಿಯೊಂದಿಗೆ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಮಾರ್ಗವನ್ನು ನಿರ್ಮಿಸಲು ಸುಜುಕಿ ನಿರ್ಧರಿಸಿದೆ ಎಂದು ನಿಕ್ಕಿ ತನ್ನ ವರದಿಯ ಮೂಲವನ್ನು ಗುರುತಿಸದೆ ಹೇಳಿದೆ. ಆದರೆ, ಸುಜುಕಿ ಮೋಟಾರ್ ವಕ್ತಾರರು ಈ ವರದಿಗಳನ್ನು ಖಚಿತಪಡಿಸಲು ನಿರಾಕರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...