alex Certify BIG BREAKING NEWS: ವಾಣಿಜ್ಯ LPG ಸಿಲಿಂಡರ್ ಬೆಲೆ 36 ರೂ. ಕಡಿತ: ಗೃಹಬಳಕೆ ಸಿಲಿಂಡರ್ ದರ ಬದಲಾವಣೆ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ವಾಣಿಜ್ಯ LPG ಸಿಲಿಂಡರ್ ಬೆಲೆ 36 ರೂ. ಕಡಿತ: ಗೃಹಬಳಕೆ ಸಿಲಿಂಡರ್ ದರ ಬದಲಾವಣೆ ಇಲ್ಲ

ನವದೆಹಲಿ: ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕಿಲೋಗ್ರಾಂ LPG ಸಿಲಿಂಡರ್‌ ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆಗೊಳಿಸಿದ್ದು, ಆಗಸ್ಟ್ 1ರ ಇಂದಿನಿಂದ ಜಾರಿಗೆ ಬರಲಿದೆ.

ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ ಎಲ್‌.ಪಿ.ಜಿ. ಸಿಲಿಂಡರ್ ಬೆಲೆ 36 ರೂಪಾಯಿಗಳಷ್ಟು ಅಗ್ಗವಾಗಿದೆ.

ದೆಹಲಿಯಲ್ಲಿ ಎಲ್‌.ಪಿ.ಜಿ. ಸಿಲಿಂಡರ್‌ ಬೆಲೆಯಲ್ಲಿ 36 ರೂಪಾಯಿ ಇಳಿಕೆಯಾದ ನಂತರ, ಪ್ರತಿ ಸಿಲಿಂಡರ್‌ಗೆ 1976.50 ರೂ. ಆಗಿದೆ. ಈ ಹಿಂದೆ ಸಿಲಿಂಡರ್‌ ಗೆ 2012.50 ರೂ. ಇತ್ತು.

ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ಗೆ 2095.50 ರೂ.ಆಗಿದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ 2132 ರೂ. ಇತ್ತು.

ಮುಂಬೈನಲ್ಲಿ ಪ್ರತಿ ಸಿಲಿಂಡರ್‌ಗೆ 1936.50 ರೂ.ಗಳಾಗಿದ್ದು, ಈ ಹಿಂದೆ ಪ್ರತಿ ಸಿಲಿಂಡರ್‌ಗೆ 1972.50 ರೂ. ದರ ಇತ್ತು.

ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ 2141 ರೂ.ಆಗಿದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ 2177.50 ರೂ. ಇತ್ತು.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 36 ರೂಪಾಯಿ ಇಳಿಕೆಯಾಗಿದೆ. ಈ ದರ ಕಡಿತದೊಂದಿಗೆ 19 ಕೆಜಿ ವಾಣಿಜ್ಯ ಎಲ್‌.ಪಿ.ಜಿ. ಸಿಲಿಂಡರ್‌ ಬೆಲೆ 2012.50 ರೂ ಬದಲಿಗೆ 1,976 ರೂ. ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...