alex Certify ಇ- ಸ್ಕೂಟರ್ ಖರೀದಿಸುವವರಿಗೆ ಗುಡ್ ನ್ಯೂಸ್: 10 ಸಾವಿರ ರೂ.ವರೆಗೆ ದರ ಇಳಿಸಿದ ಓಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇ- ಸ್ಕೂಟರ್ ಖರೀದಿಸುವವರಿಗೆ ಗುಡ್ ನ್ಯೂಸ್: 10 ಸಾವಿರ ರೂ.ವರೆಗೆ ದರ ಇಳಿಸಿದ ಓಲಾ

ನವದೆಹಲಿ: ಓಲಾ ಎಲೆಕ್ಟ್ರಿಕಲ್ ಎಸ್ 1 ಎಕ್ಸ್ ಸ್ಕೂಟರ್ ನ ವಿವಿಧ ರೀತಿಯ ಮಾಡೆಲ್ ಗಳ ಬೆಲೆಯನ್ನು 5ರಿಂದ 10 ಸಾವಿರ ರೂಪಾಯಿವರೆಗೆ ಇಳಿಕೆ ಮಾಡಲಾಗಿದೆ.

ಓಲಾ ಎಲೆಕ್ಟ್ರಿಕ್ ಮಾರ್ಕೆಟಿಂಗ್ ಅಧಿಕಾರಿ ಅನ್ಶುಲ್ ಖಂಡೇಲ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗ್ರಾಹಕರಿಗೆ ಅನುಕೂಲವಾಗುವಂತೆ ಕಂಪನಿ ಎಸ್ 1 ಎಕ್ಸ್ ಇ –ಸ್ಕೂಟರ್ ನ ವಿವಿಧ ಮಾಡೆಲ್ ಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಮುಂದಿನ ವಾರದೊಳಗೆ ವಿತರಣೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾದ ಓಲಾ ಎಲೆಕ್ಟ್ರಿಕಲ್ ಎಸ್ 1 ಎಕ್ಸ್ ಮೂರು ಮಾಡೆಲ್ ಗಳ ದರ 79,999 ರೂಪಾಯಿಯಿಂದ 1,09,999 ರೂಪಾಯಿವರೆಗೆ ಇದೆ. 4 ವ್ಯಾಟ್ ಬ್ಯಾಟರಿ ಹೊಂದಿರುವ ಎಸ್ 1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 99, 999 ರೂ.ಗೆ, 3 ವ್ಯಾಟ್ ಬ್ಯಾಟರಿ ಹೊಂದಿರುವ ಎಸ್ 1 ಎಕ್ಸ್ ಇವಿ ಬೆಲೆ 84,999 ರೂ.ಗೆ, 2 ವ್ಯಾಟ್ ಬ್ಯಾಟರಿ ಹೊಂದಿರುವ ಎಸ್ 1 ಎಕ್ಸ್ ಇವಿ ಬೆಲೆ 69,999 ರೂಪಾಯಿಗೆ ಇಳಿಕೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...