alex Certify ತ್ಯಾಜ್ಯದಿಂದ ಬೈಕ್ ಅಭಿವೃದ್ಧಿಪಡಿಸಿದ 9ನೇ ತರಗತಿ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ಯಾಜ್ಯದಿಂದ ಬೈಕ್ ಅಭಿವೃದ್ಧಿಪಡಿಸಿದ 9ನೇ ತರಗತಿ ವಿದ್ಯಾರ್ಥಿ

Kerala Boy Makes 'Light Motorcycle' Using Scrap from Father's ...

ಕಸದಿಂದ ರಸ ಎಂಬ ನಾಣ್ಣುಡಿಯನ್ನು ಅಕ್ಷರಶಃ ಸಾಬೀತುಪಡಿಸುವ ನಿದರ್ಶನವೊಂದರಲ್ಲಿ ಕೇರಳದ ಕೊಚ್ಚಿಯ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಆಟೋಮೊಬೈಲ್ ವರ್ಕ್‌ಶಾಪ್‌ನಲ್ಲಿ ಇದ್ದ ತ್ಯಾಜ್ಯ ವಸ್ತುಗಳನ್ನು ಬಳಸಿ ಹಗುರವಾದ ಮೋಟರ್‌ ಸೈಕಲ್ ಒಂದನ್ನು ಅಭಿವೃದ್ಧಿ ಪಡಿಸಿದ್ದಾನೆ.

ಅರ್ಶದ್ ಹೆಸರಿನ ಈ ಹುಡುಗ ಈ ಆವಿಷ್ಕಾರೀ ಮೋಟರ್ ‌ಸೈಕಲ್‌ ಅಭಿವೃದ್ಧಿಪಡಿಸಿದ್ದು, ಇದು ಒಂದು ಲೀಟರ್‌ ಪೆಟ್ರೋಲ್ ‌ನಲ್ಲಿ 50 ಕಿ.ಮೀ. ದೂರ ಕ್ರಮಿಸಬಲ್ಲದು. ಮುಂದಿನ ಬಾರಿ ಟ್ರಾಲಿಯೊಂದನ್ನು ಅಭಿವೃದ್ಧಿಪಡಿಸುವ ಇರಾದೆಯನ್ನು ಈತ ಹೊಂದಿದ್ದಾನೆ.

ಒಂದೂವರೆ ತಿಂಗಳಿನಿಂದ ಬಲೇ ಜತನದಿಂದ ನಾಜೂಕಾಗಿ ಒಂದೊಂದೇ ಸ್ಕ್ರಾಪ್ ‌ಅನ್ನು ಸೇರಿಸಿ ಈತ ಅಭಿವೃದ್ಧಿ ಮಾಡಿರುವ ಈ ಬೈಕ್ ನೋಡುಗರ ಮನಗೆಲ್ಲುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...