alex Certify ಹೊಸ ವರ್ಷಕ್ಕೆ ಚಿನ್ನ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: 60 ಸಾವಿರ ರೂ.ಗೆ ಏರಿಕೆಯಾಗಲಿದೆ ಚಿನ್ನದ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಚಿನ್ನ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: 60 ಸಾವಿರ ರೂ.ಗೆ ಏರಿಕೆಯಾಗಲಿದೆ ಚಿನ್ನದ ದರ

ಜಾಗತಿಕ ಮಾರುಕಟ್ಟೆಗಳ ಏರಿಳಿತದಿಂದ ಹೆಚ್ಚಿನ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ 2023 ರಲ್ಲಿ ಚಿನ್ನದ ದರ 60 ಸಾವಿರ ರೂ. ತಲುಪುಬಹುದು ಎಂದು ಹೇಳಲಾಗಿದೆ.

2023 ರಲ್ಲಿ ಹಳದಿ ಲೋಹದ ದರ ಏರಿಕೆಯಾಗಲಿದೆ. ಹೆಚ್ಚಿನ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳತ್ತ ಒಲವು ತೋರುವುದರಿಂದ ಚಿನ್ನದ ಬೆಲೆಯು ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂಗೆ 60,000 ರೂ.ವರೆಗೆ ಏರಿಕೆಯಾಗಲಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಮಾರ್ಚ್‌ ನಲ್ಲಿ ಪ್ರತಿ ಔನ್ಸ್‌ ಗೆ $2,070 ರಿಂದ ನವೆಂಬರ್‌ನಲ್ಲಿ ಪ್ರತಿ ಔನ್ಸ್‌ ಗೆ $1,616 ಕ್ಕೆ ಇಳಿದವು. ಅಂದಿನಿಂದ ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 2022 ರ ಆರಂಭದಲ್ಲಿ ಚಿನ್ನದ ಬೆಲೆಗಳು ಪ್ರತಿ ಔನ್ಸ್ ಸುಮಾರು $ 1,800 ಆಗಿತ್ತು.

ಪ್ರಸ್ತುತ, ಹಳದಿ ಲೋಹದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಔನ್ಸ್‌ಗೆ $1,803 ಮತ್ತು ಸರಕುಗಳ ಸ್ಟಾಕ್ ಎಕ್ಸ್‌ಚೇಂಜ್ ಎಂಸಿಎಕ್ಸ್‌ ನಲ್ಲಿ 10 ಗ್ರಾಂಗೆ 54,790 ರೂ. ರಷ್ಟಿದೆ, ಈ ಸಮಯದಲ್ಲಿ ರೂಪಾಯಿಯು US ಡಾಲರ್‌ಗೆ 83-ಹಂತದಲ್ಲಿದೆ. ಮುಂದೆ ಭೌಗೋಳಿಕ ರಾಜಕೀಯ ಪರಿಸ್ಥಿತಿ, ಆರ್ಥಿಕ ಹಿಂಜರಿತದ ಆತಂಕಗಳು, ಹಣದುಬ್ಬರ ಪ್ರವೃತ್ತಿಗಳು ಮತ್ತು ಕ್ರಿಪ್ಟೋ ಕುಸಿತ ಸೇರಿದಂತೆ ಹಲವು ಕಾರಣಗಳಿಂದಾಗಿ ಅನಿಶ್ಚಿತ ಸಮಯದಲ್ಲಿ ಸುರಕ್ಷಿತ ಧಾಮವೆಂದು ಪರಿಗಣಿಸುವುದರಿಂದ ಚಿನ್ನದ ಬೆಲೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...