alex Certify GOOD NEWS: ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಿದೆ ಅಮೆಜಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಿದೆ ಅಮೆಜಾನ್

ಭಾರತಕ್ಕೆ ಭೇಟಿ ನೀಡಿದ ಒಂದು ವರ್ಷದ ಬಳಿಕ ಅಮೆಜಾನ್​ ಸಿಇಓ ಜೆಫ್​ ಬೆಜೋಸ್​​ ತನ್ನ ಭವಿಷ್ಯದ ಇಂಜಿನಿಯರ್​ ಕಾರ್ಯಕ್ರಮವನ್ನ ದೇಶಕ್ಕೆ ಹೊತ್ತು ತರುತ್ತಿದ್ದಾರೆ.‌

ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕೋಡಿಂಗ್​ ಹಾಗೂ ಇತರೆ ಕಂಪ್ಯೂಟರ್​ ಕೌಶಲ್ಯಗಳನ್ನ ಒದಗಿಸುವ ಗುರಿಯನ್ನ ಹೊಂದಿದೆ. ಇದು ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸಹಕಾರಿಯಾಗಲಿದೆ.

ಈ ವೃತ್ತಿಪರ ಕೌಶಲ್ಯದ ಕಾರ್ಯಕ್ರಮವನ್ನ ಪ್ರಸ್ತುತ ಅಮೆಜಾನ್​ ಅಮೆರಿಕದಲ್ಲಿ ನಡೆಸುತ್ತಿದೆ. ಅಮೆಜಾನ್,​ ಭಾರತದಲ್ಲಿ ಅಮೆಜಾನ್​ ಫ್ಯೂಚರ್​ ಇಂಜಿನಿಯರ್​ ಕಾರ್ಯಕ್ರಮವನ್ನ ಮುನ್ನೆಡಸಲು ವ್ಯವಸ್ಥಾಪಕರನ್ನ ಹುಡುಕುತ್ತಿದೆ.

ನಾವು ಭಾರತದಲ್ಲಿ ಅಮೆಜಾನ್​ ಫ್ಯೂಚರ್​ ಇಂಜಿನಿಯರ್​ ಕಾರ್ಯಕ್ರಮವನ್ನ ಪ್ರಾರಂಭಿಸಲು ಹಾಗೂ ನಿರ್ವಹಿಸಬಲ್ಲ ನಾಯಕನ ಹುಡುಕಾಟದಲ್ಲಿದ್ದೇವೆ. ಜಾಬ್​ ಪೋಸ್ಟ್ ವೆಬ್​ಸೈಟ್​ ಉದ್ಯೋಗ ಪಟ್ಟಿಯ ಪ್ರಕಾರ 2021ರಲ್ಲಿ ಕಂಪನಿಯು ಈ ಕಾರ್ಯಕ್ರಮವನ್ನ ಪ್ರಾರಂಭಿಸಲು ಯೋಜಿಸುತ್ತಿದೆ.

ಈ ಪಟ್ಟಿಯಲ್ಲಿ ಅಮೆಜಾನ್​ ಇಂಡಿಯಾದ ಕಾರ್ಪೋರೇಟ್​ ಸಾಮಾಜಿಕ ಜವಾಬ್ದಾರಿ ತಂಡದ ಭಾಗವಾಗಿ ಅಮೆಜಾನ್​ ಫ್ಯೂಚರ್​ ಇಂಜಿನಿಯರ್​ ಕಾರ್ಯಕ್ರಮವನ್ನ ಮುನ್ನೆಡಸಲು ಪೂರ್ಣ ಸಮಯದ ಗುತ್ತಿಗೆ ಸ್ಥಾನ ಎಂದು ಉಲ್ಲೇಖಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...