alex Certify ‘ದಿ ಡರ್ಟಿ ಪಿಕ್ಚರ್’​ ಖ್ಯಾತಿಯ ನಟಿ ಶವ ಅಪಾರ್ಟ್​ಮೆಂಟ್​​ನಲ್ಲಿ ಪತ್ತೆ: ತೀವ್ರಗೊಂಡ ತನಿಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದಿ ಡರ್ಟಿ ಪಿಕ್ಚರ್’​ ಖ್ಯಾತಿಯ ನಟಿ ಶವ ಅಪಾರ್ಟ್​ಮೆಂಟ್​​ನಲ್ಲಿ ಪತ್ತೆ: ತೀವ್ರಗೊಂಡ ತನಿಖೆ

ಬಾಲಿವುಡ್​​ನ ಖ್ಯಾತ ಸಿನಿಮಾಗಳಲ್ಲಿ ಒಂದಾದ ‘ದಿ ಡರ್ಟಿ ಪಿಕ್ಚರ್’​ನಲ್ಲಿ ನಟಿಸಿದ್ದ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅಪಾರ್ಟ್​ಮೆಂಟ್​ನ ಮೂರನೇ ಮಹಡಿಯಲ್ಲಿ ಬಾಗಿಲು ತೆರೆದಾಗ 33 ವರ್ಷದ ನಟಿಯ ಶವ ಪತ್ತೆಯಾಗಿದೆ. ಸಿತಾರ್​ ವಾದಕ ದಿವಂಗತ ನಿಖಿಲ್​ ಬಂಡ್ಯೋಪಾಧ್ಯಾಯ ಪುತ್ರಿಯಾಗಿದ್ದ ಆರ್ಯ ಎಲ್​ಎಸ್​ಡಿ : ‘ಲವ್​ ಸೆಕ್ಸ್​​ ಓರ್​​ ದೋಖಾ'(2010), ‘ದಿ ಡರ್ಟಿ ಪಿಕ್ಚರ್’​(2011)ನಲ್ಲಿ ನಟಿಸಿದ್ದರು. ಬಾಲಿವುಡ್​​ನ ಹಲವಾರು ಚಿತ್ರಗಳಲ್ಲೂ ನಟಿ ಆರ್ಯ ನಟಿಸಿದ್ದಾರೆ.
ಮುಂಬೈನಲ್ಲಿ ಮಾಡಲಿಂಗ್​ ಕೆಲಸ ಮಾಡುತ್ತಿದ್ದ ನಟಿ ಬೆಳಗ್ಗೆ ಫೋನ್​ ಕಾಲ್​​ಗಳನ್ನ ಸ್ವೀಕರಿಸದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕೊಠಡಿಯ ಬಾಗಿಲನ್ನ ಒಡೆದಿದ್ದಾರೆ.
ಸದ್ಯ ನಟಿಯ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವಿಧಿವಿಜ್ಞಾನ ತಂಡವು ಆಕೆಯ ರೂಂನಲ್ಲಿದ್ದ ವಸ್ತುಗಳನ್ನ ಸಂಗ್ರಹಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...