alex Certify ಬೈಕ್ ಗಿಂತ ದುಬಾರಿ ರಣಬೀರ್ ಸೈಕಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ಗಿಂತ ದುಬಾರಿ ರಣಬೀರ್ ಸೈಕಲ್…!

ಬಾಲಿವುಡ್ ಸೆಲೆಬ್ರಿಟಿಗಳು ದುಬಾರಿ ಕಾರುಗಳು ಮತ್ತು ಬೈಕುಗಳಲ್ಲಿ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಸೆಲೆಬ್ರಿಟಿಗಳು ಸೈಕ್ಲಿಂಗ್ ಮಾಡ್ತಿರುತ್ತಾರೆ. ರಣಬೀರ್ ಕಪೂರ್ ಹೊಸ ಎಲೆಕ್ಟ್ರಿಕ್ ಸೈಕಲ್ ಖರೀದಿ ಮಾಡಿದ್ದಾರೆ. ಕೆಂಪು ಬಣ್ಣದ ಈ ಇ-ಬೈಕು ಸುಂದರವಾಗಿದೆ.ಆದರೆ ಇದರ ಬೆಲೆ ತಲೆ ಸುತ್ತುತ್ತೆ.

ಈ ಸೈಕಲ್ ಬೆಲೆ ಬೈಕ್ ಗಿಂತ ಹೆಚ್ಚು ದುಬಾರಿಯಾಗಿದೆ. ರಣಬೀರ್ ಕಪೂರ್ ಈ ಹೊಸ ಇ-ಸೈಕಲ್ ಬೆಲೆ ಸುಮಾರು 1.5 ಲಕ್ಷ ರೂಪಾಯಿಗಳು. ಆಲಿಯಾ ಭಟ್ ಈ ಸೈಕಲನ್ನು  ರಣಬೀರ್‌ಗೆ ಉಡುಗೊರೆ ನೀಡಿದ್ದಾರೆ ಎನ್ನಲಾಗ್ತಿದೆ. ಸೈಕಲ್ ಕಂಪನಿ ತನ್ನ ಅಧಿಕೃತ ಪುಟದಲ್ಲಿ ರಣವೀರ್ ಸೈಕಲ್ ಫೋಟೋ, ವಿಡಿಯೋ ಹಂಚಿಕೊಂಡಿದೆ. ಹಾಗೆ ಆಲಿಯಾಗೆ ಟ್ಯಾಗ್ ಮಾಡಿದೆ.

ʼಸಂಜುʼ ಚಿತ್ರದ ನಂತ್ರ ರಣಬೀರ್ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ರಣಬೀರ್ ಎರಡು ಚಿತ್ರದಲ್ಲಿ ನಟಿಸುತ್ತಿದ್ದಾರೆ. ʼಶಂಶೇರಾʼ ಹಾಗೂ ʼಬ್ರಹ್ಮಾಸ್ತ್ರʼ ಚಿತ್ರದಲ್ಲಿ ರಣಬೀರ್ ನಟಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...