HomeLifestyleಅಂದದ ನವಿಲು ವಿಷಕಾರಿ ಹಾವನ್ನು ತಿಂದರೂ ಸಾಯುವುದಿಲ್ಲವೇಕೆ? ಇಲ್ಲಿದೆ ಅಚ್ಚರಿಯ ರಹಸ್ಯ!

ಅಂದದ ನವಿಲು ವಿಷಕಾರಿ ಹಾವನ್ನು ತಿಂದರೂ ಸಾಯುವುದಿಲ್ಲವೇಕೆ? ಇಲ್ಲಿದೆ ಅಚ್ಚರಿಯ ರಹಸ್ಯ!

ನವಿಲು ಅಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಅದರ ವರ್ಣರಂಜಿತ ಪುಕ್ಕಗಳು ಮತ್ತು ಗಂಭೀರವಾದ ನಡಿಗೆ. ಆದರೆ ಪ್ರಕೃತಿಯ ಈ ಸುಂದರ ಪಕ್ಷಿ ಅತ್ಯಂತ ಕ್ರೂರ ಬೇಟೆಗಾರ ಎಂಬುದು ಹಲವರಿಗೆ ತಿಳಿದಿಲ್ಲ. ಅದರಲ್ಲೂ ವಿಶೇಷವಾಗಿ ನಾಗರಹಾವಿನಂತಹ ಭಯಾನಕ ವಿಷಕಾರಿ ಹಾವುಗಳನ್ನು ನವಿಲು ಅತ್ಯಂತ ಲೀಲಾಜಾಲವಾಗಿ ಬೇಟೆಯಾಡಿ ತಿನ್ನುತ್ತದೆ. ಹಾಗಾದರೆ ಹಾವಿನ ಹಲ್ಲುಗಳಲ್ಲಿರುವ ಆ ತೀವ್ರವಾದ ವಿಷ ನವಿಲಿಗೆ ಏನೇನೂ ಮಾಡುವುದಿಲ್ಲವೇ? ಇದಕ್ಕೆ ವಿಜ್ಞಾನದ ಉತ್ತರ ಇಲ್ಲಿದೆ.

ವಿಷವನ್ನು ಜೀರ್ಣಿಸಿಕೊಳ್ಳುವ ರಹಸ್ಯ: ವನ್ಯಜೀವಿ ತಜ್ಞರ ಪ್ರಕಾರ, ನವಿಲು ಸರ್ವಭಕ್ಷಕ ಪ್ರಾಣಿಯಾಗಿದ್ದು, ಇದು ಕೀಟಗಳ ಜೊತೆಗೆ ಹಾವಿನಂತಹ ಉರಗಗಳನ್ನು ತನ್ನ ಆಹಾರವಾಗಿಸಿಕೊಳ್ಳುತ್ತದೆ. ಹಾವಿನ ವಿಷ ಎಂಬುದು ಮೂಲತಃ ಒಂದು ಸಂಕೀರ್ಣ ಪ್ರೋಟೀನ್ ಆಗಿದೆ. ಈ ವಿಷವು ನೇರವಾಗಿ ರಕ್ತಕ್ಕೆ ಸೇರಿದರೆ ಮಾತ್ರ ಪ್ರಾಣಾಪಾಯ ಉಂಟಾಗುತ್ತದೆ. ಆದರೆ ನವಿಲು ಹಾವನ್ನು ನುಂಗಿದಾಗ ಆ ವಿಷವು ಅದರ ಜೀರ್ಣಾಂಗಕ್ಕೆ ಹೋಗುತ್ತದೆ. ಹೊಟ್ಟೆಯಲ್ಲಿರುವ ಜೀರ್ಣರಸಗಳು ಹಾವಿನ ವಿಷವನ್ನು ಸಾಮಾನ್ಯ ಆಹಾರದಂತೆ ವಿಭಜಿಸಿ ಜೀರ್ಣಿಸಿಕೊಳ್ಳುತ್ತವೆ.

ರಕ್ತಕ್ಕೆ ಸೇರದಿದ್ದರೆ ಅಪಾಯವಿಲ್ಲ: ನವಿಲು ಹಾವನ್ನು ಸಂಪೂರ್ಣವಾಗಿ ನುಂಗುವುದರಿಂದ ವಿಷವು ಅದರ ರಕ್ತನಾಳಗಳಿಗೆ ಸೇರುವ ಸಾಧ್ಯತೆ ಇರುವುದಿಲ್ಲ. ಒಂದು ವೇಳೆ ನವಿಲಿನ ಬಾಯಿ ಅಥವಾ ಜಠರದಲ್ಲಿ ಗಾಯ ಅಥವಾ ಅಲ್ಸರ್ ನಂತಹ ಸಮಸ್ಯೆಗಳಿದ್ದರೆ ಮಾತ್ರ ವಿಷವು ರಕ್ತಕ್ಕೆ ಸೇರಿ ಅಪಾಯಕಾರಿಯಾಗಬಲ್ಲದು. ಆದರೆ ಪಕ್ಷಿಗಳಲ್ಲಿ ಇಂತಹ ಆಂತರಿಕ ಗಾಯಗಳು ಕಂಡುಬರುವುದು ಬಹಳ ಅಪರೂಪ. ಹೀಗಾಗಿ ವಿಷವು ರಕ್ತದ ಸಂಪರ್ಕಕ್ಕೆ ಬಾರದೆ ನೇರವಾಗಿ ಹೊಟ್ಟೆ ಸೇರುವುದರಿಂದ ನವಿಲು ಯಾವುದೇ ಹಾನಿಯಿಲ್ಲದೆ ಸುರಕ್ಷಿತವಾಗಿ ಉಳಿಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ: ಹಿಂದೂ ಧರ್ಮದಲ್ಲಿ ನವಿಲನ್ನು ಪವಿತ್ರ ಎಂದು ಪರಿಗಣಿಸಲು ಮತ್ತು ಕಾರ್ತಿಕೇಯನ ವಾಹನ ಎಂದು ಪೂಜಿಸಲು ಅದರ ಈ ವಿಶಿಷ್ಟ ಶಕ್ತಿಯೂ ಒಂದು ಕಾರಣವಾಗಿದೆ. ಪ್ರಕೃತಿಯಲ್ಲಿ ಹಾವಿನ ವಿಷವನ್ನು ನಿರ್ಣಾಮ ಮಾಡುವ ಈ ವಿಶೇಷ ಸಾಮರ್ಥ್ಯದಿಂದಾಗಿ ನವಿಲನ್ನು ‘ನೈಸರ್ಗಿಕ ಹಾವಿನ ಬೇಟೆಗಾರ’ ಎಂದು ಕರೆಯಲಾಗುತ್ತದೆ. ತನ್ನ ಈ ಜೀರ್ಣಕ್ರಿಯೆಯ ರಹಸ್ಯದಿಂದಲೇ ನವಿಲು ಎಂತಹ ವಿಷಕಾರಿ ಹಾವನ್ನು ತಿಂದರೂ ಅತ್ಯಂತ ಚೈತನ್ಯದಿಂದ ಮತ್ತು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular