HomeEntertainment'ಪ್ರೇಮದ ಊರಲಿ' ಸಿನಿಮಾದ ''ಪ್ರೀತಿ ಬೇಡಿತು ಹೃದಯ'' ಹಾಡು ರಿಲೀಸ್!

‘ಪ್ರೇಮದ ಊರಲಿ’ ಸಿನಿಮಾದ ”ಪ್ರೀತಿ ಬೇಡಿತು ಹೃದಯ” ಹಾಡು ರಿಲೀಸ್!

ಸ್ಯಾಂಡಲ್ ವುಡ್ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ‘ಪ್ರೇಮದ ಊರಲಿ’ ಸಿನಿಮಾದ ಮತ್ತೊಂದು ವಿಶೇಷ ಗೀತೆ ಬಿಡುಗಡೆಗೊಂಡು ಭರ್ಜರಿ ಸದ್ದು ಮಾಡುತ್ತಿದೆ. ಈ ಚಿತ್ರದ ಪ್ರೀತಿ ಬೇಡಿತು ಹೃದಯ ಎಂಬ ಮಧುರವಾದ ಲಿರಿಕಲ್ ಹಾಡು ನಿನ್ನೆ ಜನಪ್ರಿಯ ಆನಂದ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಲೋಕಾರ್ಪಣೆಗೊಂಡಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕನ್ನಡಿಗರ ಮನಸ್ಸನ್ನು ಗೆದ್ದು ಅಪಾರ ವೀಕ್ಷಣೆ ಹಾಗೂ ಮೆಚ್ಚುಗೆಯನ್ನು ಪಡೆದುಕೊಂಡು ಮುನ್ನಡೆಯುತ್ತಿದೆ.

ಚಿತ್ರದ ಈ ಆಕರ್ಷಕ ಹಾಡಿಗೆ ಪ್ರತಿಭಾವಂತ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಅವರು ಅತ್ಯುತ್ತಮವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರೇಮದ ಭಾವನೆಗಳು ಹಾಗೂ ಹೃದಯದ ಮಾತುಗಳನ್ನು ಧ್ವನಿಸುವಂತಹ ಸಾಹಿತ್ಯವನ್ನು ಮನೋಜ್ ಕುಮಾರ್ ರಚಿಸಿದ್ದಾರೆ. ನವೀನ್ ವಿಶಾರದ, ನಿನಾದ ನಾಯಕ್ ಹಾಗೂ ದಿ ಕೌಂಟರ್ ಪಾಯಿಂಟ್ ಕ್ರೂ ಗಾಯಕರು ತಮ್ಮ ಮೋಡಿ ಮಾಡುವ ಧ್ವನಿಯ ಮೂಲಕ ಹಾಡಿಗೆ ಜೀವ ತುಂಬಿದ್ದು, ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ವಿಶೇಷವಾಗಿ ಈ ಹಾಡಿಗೆ ಅಂತರರಾಷ್ಟ್ರೀಯ ಮಟ್ಟದ ಮೆರುಗು ನೀಡಲು ಹಂಗೇರಿಯ ಪ್ರತಿಷ್ಠಿತ ಬುದಾಪೆಸ್ಟ್ ಸ್ಕೋರಿಂಗ್ ಆರ್ಕೆಸ್ಟ್ರಾ ವಾದ್ಯ ವೃಂದದೊಂದಿಗೆ ಧ್ವನಿಮುದ್ರಿಸಿಕೊಳ್ಳಲಾಗಿದೆ. ಈ ವಿಶ್ವದರ್ಜೆಯ ಸಂಗೀತ ಸಂಯೋಜನೆ ಮತ್ತು ವಾದ್ಯಗಳ ಬಳಕೆಯು ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗವಾಗಿದ್ದು, ಸಿನಿರಸಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮನೋಜ್ ಕುಮಾರ್ ನಿರ್ದೇಶನದ ಈ ಚಲನಚಿತ್ರದಲ್ಲಿ ಶ್ರೀರಾಮ್, ಖ್ಯಾತ ನಟ ರಂಗಾಯಣ ರಘು, ತಪಸ್ವಿನಿ ಪೂಣಚ್ಚ ಹಾಗೂ ರಾಮಿಕಾ ಶಿವು ಸೇರಿದಂತೆ ಪ್ರಮುಖ ತಾರಾಗಣ ಅಭಿನಯಿಸಿದೆ. ವನಿಲ್ಲಾ ಎಂಟರ್ಟೈನ್ಮೆಂಟ್ಸ್ ಹಾಗೂ ಜನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮಮತಾ ದೇವೇಂದ್ರ, ಪ್ರಶಾಂತ್ ಡಿ ಎಸ್ ಮತ್ತು ರಮೇಶ ಎನ್ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸ್ಯಾಂಡಲ್ ವುಡ್ ವಲಯದಲ್ಲಿ ಸಿನಿಮಾ ಗಳಿಸಿರುವ ಯಶಸ್ಸು ಮತ್ತು ಜನಪ್ರಿಯತೆ ಎಲ್ಲರ ಗಮನ ಸೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular