HomeKarnatakaSHOCKING: ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ಉದ್ಯಮಿ

SHOCKING: ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಉಡುಪಿ: ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲಿ ಉದ್ಯಮಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.

ಸುದೀಪ್ ಶೆಟ್ಟಿ ಮೃತ ಉದ್ಯಮಿ. ಕಾರ್ಕಳ ತಾಲೂಕಿನ ಬಂಗ್ಲಗುಡ್ಡೆ ನಿವಾಸಿ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸಂದೀಪ್ ಶೆಟ್ಟಿ, ಮೇಕಪ್ ಆರ್ಟಿಸ್ಟ್ ಹಾಗೂ ನಾತಕ ತಂಡಗಳಲ್ಲಿ ಕಲಾವಿದೆಯಾಗಿದ್ದ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ವಿವಾಹವಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯವನ್ನು ಒಪ್ಪಿಸಿ ಸೌಮ್ಯಾಳನ್ನು ವಿವಾಹವಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿತ್ತು. ಉಡುಪಿಯ ಕಾರ್ಕಳದಲ್ಲಿರುವ ಸೌಮ್ಯಾಳ ಮನೆಯಲ್ಲಿ ಕೆಲ ದಿನಗಳ ಕಾಲ ಸಂದೀಪ್ ಕಾಲ ಕಳೆದಿದ್ದರು. ಬಳಿಕ ತನ್ನ ಮನೆಗೆ ಹೋಗಿದ್ದ ಸುದೀಪ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದರಿಂದ ಗಾಬರಿಯಾದ ಸೌಮ್ಯಾ ಪತಿಯ ಮನೆಯತ್ತ ಬರುತ್ತಿದ್ದಾಗ ಆತ ತಾಯಿಯೊಂದಿಗೆ ಕಾರಿನಲ್ಲಿ ಹೋಗುತ್ತಿರುವುದನ್ನು ಕಂಡು ಪ್ರಶ್ನಿಸಿದ್ದಳು.

ಇಬ್ಬರ ನಡುವೆ ಮಾತುಕತೆ ನಡೆದಿದೆ. ಬಳಿಕ ಸಂದೀಪ್ ಕಾರ್ಕಳದಲ್ಲಿರುವ ಪತ್ನಿ ಮನೆಗೆ ಬಂದಿದ್ದರು. ಮರುದಿನ ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಸೌಮ್ಯ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದಾಗಲೇ ಗೊತ್ತಾಗಿದ್ದು, ಆತ ಅದಾಗಲೇ ವಿಷ ಸೇವಿಸಿದ್ದಾರೆ ಎಂಬುದು. ಬಳಿಕ ಸುದೀಪ್ ತಂದೆ ಮಗನನ್ನು ಮಂಗಳೂರಿನ ಯೇನಪೋಯ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಮಗನ ಸಾವಿಗೆ ಸೊಸೆ ಕಾರಣ ಎಂದು ಮಾವ ದೂರು ದಾಖಲಿಸಿದ್ದಾರೆ. ಆದರೆ ಪತ್ನಿ ಸೌಮ್ಯಾಳಿಗೆ ಪತಿ ವಿಷ ಸೇವಿಸಲು ಕಾರಣವೇನೆಂಬುದೇ ಗೊತ್ತಿಲ್ಲ. ಇದರಲ್ಲಿ ತನ್ನ ತಪ್ಪಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ತನಿಖೆಯಾಗಲಿ ಎಂದು ಸೌಮ್ಯ ಕೂಡ ದೂರು ದಾಖಲಿಸಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಉದ್ಯಮಿ ಆತ್ಮಹತ್ಯೆಗೆ ಕಾರಣವೇನು ಎಂಬುದು ತನಿಖೆ ಬಳಿಕವೇ ಗೊತ್ತಾಗಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular