HomeLatest News14 ಕೆಜಿ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ ನಟಿ ಅಮೃತಾ ಅರೋರಾ: ಫಿಟ್‌ನೆಸ್ ಹಾಗೂ ಡಯಟ್...

14 ಕೆಜಿ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ ನಟಿ ಅಮೃತಾ ಅರೋರಾ: ಫಿಟ್‌ನೆಸ್ ಹಾಗೂ ಡಯಟ್ ಗುಟ್ಟು ಏನು?

ಬಾಲಿವುಡ್ ನಟಿ ಅಮೃತಾ ಅರೋರಾ ತಮ್ಮ ಅದ್ಭುತ ಮೈಕಟ್ಟು ಹಾಗೂ ತೂಕ ಇಳಿಕೆಯ ಮೂಲಕ ಸೋಷಿಯಲ್ ಮೀಡೀಯಾದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಹದಿನಾಲ್ಕು ಕೆಜಿ ತೂಕ ಕಳೆದುಕೊಂಡು ಹೊಸ ರೂಪದಲ್ಲಿ ಕಾಣಿಸಿಕೊಂಡಿರುವ ನಟಿ, ತಮ್ಮ ಈ ನಂಬಲಾಗದ ಫಿಟ್‌ನೆಸ್ ಹಾಗೂ ಡಯಟ್ ಗುಟ್ಟನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಆಹಾರ ಪದ್ಧತಿಯಲ್ಲಿ ಕಠಿಣ ಕ್ರಮಗಳನ್ನು ಅನುಸರಿಸಿರುವ ಅಮೃತಾ, ಸಂಪೂರ್ಣವಾಗಿ ಬೇಯಿಸಿದ (ಸ್ಟೀಮ್ಡ್) ಆಹಾರ ಶೈಲಿಗೆ ಬದಲಾಗಿದ್ದಾರೆ. ಇದರೊಂದಿಗೆ ಪ್ರೋಟೀನ್ ಸೇವನೆಗೆ ಹೆಚ್ಚಿನ ಆದ್ಯತೆ ನೀಡಿ, ಕಾರ್ಬೋಹೈಡ್ರೇಟ್ಸ್ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಇಂಟರ್‌ಮಿಟೆಂಟ್ ಫಾಸ್ಟಿಂಗ್ ಅಂದರೆ ಉಪವಾಸ ಪದ್ಧತಿ ತಮಗೆ ಉತ್ತಮ ಫಲಿತಾಂಶ ನೀಡಿದೆ ಎಂದು ತಿಳಿಸಿರುವ ಅವರು, ಸಂಜೆ ಏಳೂವರೆ ಗಂಟೆಯೆa ಒಳಗೆ ರಾತ್ರಿ ಊಟ ಮುಗಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಮರುದಿನ ಬೆಳಗಿನ ಉಪಾಹಾರವನ್ನು ತಪ್ಪಿಸುವುದಾಗಿ ತಿಳಿಸಿದ್ದಾರೆ.

ಆಹಾರದಲ್ಲಿ ಸಕ್ಕರೆ ಮತ್ತು ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ವರ್ಜಿಸಿರುವ ನಟಿ, ಪ್ರತಿದಿನ ಒಂದೇ ರೀತಿಯ ಸರಳ ಆಹಾರ ಸೇವಿಸುವುದನ್ನು ರೂಢಿಸಿಕೊಂಡಿದ್ದಾರೆ. ಯಾವುದೇ ವಿಶೇಷ ಅಥವಾ ವಿಭಿನ್ನ ಮೆನು ತಮಗೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ತಮ್ಮ ನೆಚ್ಚಿನ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗಲೂ, ಕೇವಲ ಎರಡು ತುಂಡುಗಳಷ್ಟು ತಮಗೆ ಇಷ್ಟವಾದ ಚಿಕನ್ ಸವಿದು, ಬಳಿಕ ತಮ್ಮ ನೆಚ್ಚಿನ ಸ್ಟೀಮ್ಡ್ ಮೀನಿನ ಆಹಾರಕ್ಕೇ ಮರಳಿದ್ದಾಗಿ ಅವರು ಖುಷಿಯಿಂದ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡೆಲಿಂಗ್ ಮೂಲಕ ವೃತ್ತಿಜೀವನ ಆರಂಭಿಸಿ ವಿಡಿಯೋ ಜಾಲಿಯಾಗಿ ಗುರುತಿಸಿಕೊಂಡಿದ್ದ ಅಮೃತಾ ಅರೋರಾ, 2002ರಲ್ಲಿ ಬಿಡುಗಡೆಯಾದ ‘ಕಿತನೆ ದೂರ್ ಕಿತನೆ ಪಾಸ್’ ಸಿನಿಮಾದ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು. ಅವಾರಾ ಪಾಗಲ್ ದೀವಾನಾ, ಮುಝ್ಸೆ ಶಾದಿ ಕರೋಗಿ ಹಾಗೂ ಗೋಲ್ಮಾಲ್ ರಿಟರ್ನ್ಸ್ ನಂತಹ ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಅವರು, 2009ರ ‘ಕಂಬಕ್ತ ಇಷ್ಕ್’ ಚಿತ್ರದಲ್ಲಿ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular