HomeLatest Newsಹಸಿರು ಬಣ್ಣಕ್ಕೆ ‘ವಾಟ್ಸಾಪ್’ ಗುಡ್‌ಬೈ : ಬರಲಿದೆ ಮಲ್ಟಿ-ಕಲರ್ ಚಾಟಿಂಗ್ ವೈಶಿಷ್ಟ್ಯ !

ಹಸಿರು ಬಣ್ಣಕ್ಕೆ ‘ವಾಟ್ಸಾಪ್’ ಗುಡ್‌ಬೈ : ಬರಲಿದೆ ಮಲ್ಟಿ-ಕಲರ್ ಚಾಟಿಂಗ್ ವೈಶಿಷ್ಟ್ಯ !

ವರ್ಷಗಳಿಂದ ವಾಟ್ಸಾಪ್‌ನ ಅದೇ ಹಳೆಯ ಹಸಿರು ಇಂಟರ್‌ಫೇಸ್ ನೋಡಿ ನಿಮಗೆ ಬೋರ್ ಆಗಿದೆಯೇ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ಮೆಟಾ ಸಂಸ್ಥೆಯು ನಿಮ್ಮ ಚಾಟಿಂಗ್ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಲು ಸಜ್ಜಾಗಿದೆ. ಶೀಘ್ರದಲ್ಲೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾಣುವ ವಾಟ್ಸಾಪ್‌ನ ಹಸಿರು ಲುಕ್ ಬದಲಾಗಲಿದೆ.

ಹೌದು. ವಾಟ್ಸಾಪ್ ಕಳೆದ ಹಲವು ವರ್ಷಗಳಿಂದ ತನ್ನ ಸಿಗ್ನೇಚರ್ ‘ಹಸಿರು’ (Green) ಬಣ್ಣಕ್ಕೇ ಅಂಟಿಕೊಂಡಿತ್ತು. ಆದರೆ ಈಗ ಬಳಕೆದಾರರಿಗೆ ತಮ್ಮ ಇಚ್ಛೆಯ ಬಣ್ಣವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನೀಡಲು ಮುಂದಾಗಿದೆ.ಹಾಗಾದರೆ ಹೊಸ ಬಣ್ಣ ಯಾವುದು ಎಂಬ ಕುತೂಹಲವೇ? ಕಂಪನಿಯು ಅಂತಹದೊಂದು ಅದ್ಭುತ ಫೀಚರ್ ಮೇಲೆ ಕೆಲಸ ಮಾಡುತ್ತಿದ್ದು, ಇದರ ಮೂಲಕ ನೀವು ನಿಮ್ಮ ಇಚ್ಛೆಯಂತೆ ಆಪ್‌ನ ಬಣ್ಣ ಮತ್ತು ಐಕಾನ್ ಅನ್ನು ಬದಲಾಯಿಸಿಕೊಳ್ಳಬಹುದು. ಈ ವರ್ಣರಂಜಿತ ಬದಲಾವಣೆಯ ಪೂರ್ಣ ಮಾಹಿತಿ ಇಲ್ಲಿದೆ.

ಬೀಟಾ ವರ್ಷನ್‌ನಲ್ಲಿ ಕಂಡ ಹೊಸ ಫೀಚರ್ಸ್

ವಾಟ್ಸಾಪ್‌ನ ಪ್ರತಿಯೊಂದು ಅಪ್‌ಡೇಟ್ ಮೇಲೆ ಕಣ್ಣಿಡುವ WABetaInfo ವರದಿಯ ಪ್ರಕಾರ, ಆಂಡ್ರಾಯ್ಡ್‌ನ ಇತ್ತೀಚಿನ ಬೀಟಾ ವರ್ಷನ್ 2.26.6.1 ರಲ್ಲಿ ಹಲವಾರು ಕಸ್ಟಮೈಸೇಶನ್ ಟೂಲ್‌ಗಳು ಕಾಣಿಸಿಕೊಂಡಿವೆ. ಅಂದರೆ ಇನ್ಮುಂದೆ ನೀವು ಆಪ್‌ನ ಥೀಮ್, ಬಣ್ಣ (Accent Color) ಮತ್ತು ಹೋಮ್ ಸ್ಕ್ರೀನ್ ಐಕಾನ್ ಅನ್ನು ಕೂಡ ಬದಲಾಯಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

14 ಹೊಸ ಸ್ಟೈಲಿಶ್ ಆಪ್ ಐಕಾನ್‌ಗಳು

ವರದಿಯ ಪ್ರಕಾರ, ವಾಟ್ಸಾಪ್ 14 ಹೊಸ ಮಾದರಿಯ ಆಪ್ ಐಕಾನ್‌ಗಳ ಮೇಲೆ ಕೆಲಸ ಮಾಡುತ್ತಿದೆ. ಇದರಲ್ಲಿ ನೀಲಿ, ಗುಲಾಬಿ, ಕಿತ್ತಳೆ ಮತ್ತು ನೇರಳೆ ಅಂತಹ ಸಿಂಗಲ್ ಕಲರ್‌ಗಳ ಜೊತೆಗೆ Aurora, Galaxy ಮತ್ತು Neon ನಂತಹ ಸ್ಟೈಲಿಶ್ ಡಿಸೈನ್‌ಗಳೂ ಇರಲಿವೆ. ಇದಕ್ಕಾಗಿ ನೀವು ಯಾವುದೇ ಥರ್ಡ್ ಪಾರ್ಟಿ ಆಪ್‌ಗಳನ್ನು ಬಳಸುವ ಅಗತ್ಯವಿರುವುದಿಲ್ಲ.

19 ಬಣ್ಣಗಳಲ್ಲಿ ಮಿಂಚಲಿದೆ ವಾಟ್ಸಾಪ್

ವಾಟ್ಸಾಪ್ ಕೇವಲ ಐಕಾನ್ ಮಾತ್ರವಲ್ಲದೆ, ಆಪ್ ಒಳಗಿನ ಬಟನ್ ಮತ್ತು ಟ್ಯಾಬ್‌ಗಳ ಬಣ್ಣವನ್ನು ಬದಲಾಯಿಸಲು ಅವಕಾಶ ನೀಡಲಿದೆ. ಬಳಕೆದಾರರಿಗೆ ಸುಮಾರು 19 ಕಲರ್ ಆಪ್ಶನ್‌ಗಳು ಸಿಗಲಿವೆ. ಇದರಲ್ಲಿ ರಾಯಲ್ ಬ್ಲೂ, ಟೀಲ್, ಕೋರಲ್ ಮತ್ತು ಡಾರ್ಕ್ ಆಲಿವ್ ಗ್ರೀನ್‌ನಂತಹ ಶೇಡ್‌ಗಳು ಸೇರಿವೆ. ವಿಶೇಷವೆಂದರೆ, ಹಳೆಯ ವಾಟ್ಸಾಪ್ ವಿನ್ಯಾಸವನ್ನು ಇಷ್ಟಪಡುವವರಿಗಾಗಿ ‘ಕ್ಲಾಸಿಕ್ ಡಿಸೈನ್’ ಆಯ್ಕೆಯೂ ಮರಳಿ ಬರಬಹುದು.

ಗಮನಿಸಿ: ಸದ್ಯಕ್ಕೆ ಈ ಫೀಚರ್ ಟೆಸ್ಟಿಂಗ್ ಮೋಡ್‌ನಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಸಾಮಾನ್ಯ ಬಳಕೆದಾರರಿಗೂ ಲಭ್ಯವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular