HomeIndiaಸೀಟು ಹಂಚಿಕೆಗೆ ನಾವು ರೆಡಿ, ನೀವು?; ಕಾಂಗ್ರೆಸ್‌- ಡಿಎಂಕೆ ಮಹತ್ವದ ಹೆಜ್ಜೆ!

ಸೀಟು ಹಂಚಿಕೆಗೆ ನಾವು ರೆಡಿ, ನೀವು?; ಕಾಂಗ್ರೆಸ್‌- ಡಿಎಂಕೆ ಮಹತ್ವದ ಹೆಜ್ಜೆ!

ತಮಿಳುನಾಡು ವಿಧಾನಸಭೆ ಚುನಾವಣೆ 2026ರಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಬಗ್ಗೆ ಹಲವಾರು ಉಹಾಪೋಹ ಹರಿದಾಡುತ್ತಿದೆ. 234 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್, ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ.

ರಾಜ್ಯದ ಆಡಳಿತ ಪಕ್ಷ ಡಿಎಂಕೆಗೆ ಹಲವಾರು ವರ್ಷಗಳಿಂದ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಆದರೆ ಈ ಬಾರಿ ಅಧಿಕಾರ ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಮುಂದಿಟ್ಟ ಕಾರಣ ಮೈತ್ರಿಯ ಕುರಿತು ಅಪಸ್ವರಗಳು ಕೇಳಿ ಬಂದಿತ್ತು.

ಈಗ ಡಿಎಂಕೆ ಕಡೆಯಿಂದಲೇ ಕಾಂಗ್ರೆಸ್‌ಗೆ ಮಹತ್ವದ ಸಂದೇಶ ರವಾನೆಯಾಗಿದೆ. ಸೀಟು ಹಂಚಿಕೆ ಮಾತುಕತೆಗೆ ನಾವು ರೆಡಿ ಎಂದು ಹೇಳುವ ಮೂಲಕ ಡಿಎಂಕೆ ನಾಯಕರು ಕಾಂಗ್ರೆಸ್‌ ನಾಯಕರುನ್ನು ಮಾತುಕತೆಗೆ ಆಹ್ವಾನ ಕೊಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ನೇತೃತ್ವದ ಮೈತ್ರಿಕೂಟ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಸಹ ಇದೆ. ಸತತ 2ನೇ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಮತ್ತು ತನ್ನ ಪ್ರತಿಸ್ಪರ್ಧಿ ಎಐಎಡಿಎಂಕೆ ವಿರುದ್ಧ ನಾಲ್ಕನೇ ಪ್ರಮುಖ ಚುನಾವಣೆ ಗೆಲ್ಲಲು ಡಿಎಂಕೆ ತಯಾರಿ ಆರಂಭಿಸಿದೆ.

ಪ್ರಶ್ನೆ ಮಾಡಿದ್ದ ಕಾಂಗ್ರೆಸ್: ವಿಧಾನಸಭಾ ಚುನಾವಣೆಗೆ ಮುನ್ನ ಸೀಟು ಹಂಚಿಕೆ ಮಾತುಕತೆ ವಿಳಂಬವಾಗುತ್ತಿರುವ ಬಗ್ಗೆ ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರು ಡಿಎಂಕೆ ಪಕ್ಷವನ್ನು ಪ್ರಶ್ನಿಸಿದ್ದರು.

ತಮಿಳುನಾಡು ಪ್ರತಿನಿಧಿಸುವ ಸಂಸದರಾದ ಮಾಣಿಕ್ಕಂ ಟ್ಯಾಗೋರ್ ಮತ್ತು ಕಾರ್ತಿ ಚಿದಂಬರಂ ತಮ್ಮ ಪಕ್ಷವು ಈ ಮಾತುಕತೆಗಳಿಗಾಗಿ 5 ಸದಸ್ಯರ ಸಮಿತಿಯನ್ನು ರಚಿಸಿದೆ, ಆದರೆ ಡಿಎಂಕೆ ಇನ್ನೂ ಸಮಿತಿ ರಚಿಸಿಲ್ಲ ಎಂದು ಹೇಳಿದ್ದರು.

ಈಗ ಡಿಎಂಕೆ ಪಕ್ಷದ ನಾಯಕರು ಪ್ರತಿಕ್ರಿಯಿಸಿದ್ದು, ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಮಾತುಕತೆ ನಡೆಸಲು ಯೋಜಿಸಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈಗಲೇ ಮಾತುಕತೆ ನಡೆಸುವುದು ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಆದ್ದರಿಂದ ಚುನಾವಣಾ ದಿನಾಂಕ ಘೋಷಣೆಯಾದ ತಕ್ಷಣ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು, ತಮ್ಮ ಪಕ್ಷವು ಮಾತುಕತೆ ಆರಂಭಿಸಲು ಸಿದ್ಧವಾಗಿದೆ ಡಿಸೆಂಬರ್ 1ರಂದೇ ಕಾಂಗ್ರೆಸ್ ತನ್ನ ರಾಜ್ಯ ಘಟಕದ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಸೇರಿದಂತೆ ಇತರ ನಾಯಕರ ಸಮಿತಿಯೊಂದನ್ನು ರಚಿಸಿದೆ ಮತ್ತು ಸುಮಾರು 36 ದಿನಗಳಿಂದ ಡಿಎಂಕೆ ಆಹ್ವಾನಕ್ಕಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಡಿಎಂಕೆ ನಾಯಕಿ ಕನ್ನಿಮೋಳಿ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಈ ವೇಳೆಗೆ ಸೀಟು ಹಂಚಿಕೆ ಮಾತುಕತೆ ನಡೆಸುವ ಸೂಚನೆಯನ್ನು ರಾಹುಲ್ ಗಾಂಧಿ ನೀಡಿದ್ದರು. ಡಿಎಂಕೆ-ಕಾಂಗ್ರೆಸ್ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಮೈತ್ರಿಮಾಡಿಕೊಂಡು ಬಂದಿದ್ದು, ಅದನ್ನು ಈ ಚುನಾವಣೆಯಲ್ಲಿಯೂ ಮುಂದುವರೆಸೋಣ ಎಂದು ಭರವಸೆ ನೀಡಿದ್ದರು.

ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಂಡ ಪಕ್ಷಕ್ಕೆ ಸಚಿವ ಸ್ಥಾನ ನೀಡುವುದಿಲ್ಲ. ಆದ್ದರಿಂದ ಈ ಬಾರಿ ಸೀಟು ಹಂಚಿಕೆ ಮಾತುಕತೆ ಮಾಡುವಾಗ ಅಧಿಕಾರ ಹಂಚಿಕೆಯ ಕುರಿತು ಮಾತುಕತೆಗಳನ್ನು ಮಾಡಬೇಕು ಎಂದು ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದರು.

ಆದರೆ ಇದಕ್ಕೆ ಡಿಎಂಕೆ ಒಪ್ಪಿಗೆ ನೀಡಿರಲಿಲ್ಲ. ಆದ ಕಾರಣ ಕಾಂಗ್ರೆಸ್‌-ಡಿಎಂಕೆ ಮೈತ್ರಿಯ ಸೀಟು ಹಂಚಿಕೆ ಮಾತುಕತೆ ವಿಳಂಬವಾಗುತ್ತಿದೆ. ಕಾಂಗ್ರೆಸ್ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂದು ಸುದ್ದಿಗಳು ಹಬ್ಬಿದ್ದವು. ಆದರೆ ಕಾಂಗ್ರೆಸ್ ನಾಯಕರು ಈ ಸುದ್ದಿಯನ್ನು ತಳ್ಳಿ ಹಾಕಿದ್ದರು.

ಕಾಂಗ್ರೆಸ್ ಪಕ್ಷ 2016ರ ವಿಧಾನಸಭಾ ಚುನಾವಣೆಯಿಂದಲೂ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ ಮತ್ತು ರಾಜ್ಯದಲ್ಲಿ ಕಳೆದ ಮೂರು ಪ್ರಮುಖ ಚುನಾವಣೆಗಳಲ್ಲಿ (2019 ಮತ್ತು 2024ರ ಲೋಕಸಭಾ ಚುನಾವಣೆ ಹಾಗೂ 2021ರ ವಿಧಾನಸಭಾ ಚುನಾವಣೆ) ಮೈತ್ರಿಕೂಟ ಗೆಲುವು ಸಾಧಿಸಿದೆ. ಆದರೆ, ಇದುವರೆಗೂ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಮಾಡಿಕೊಂಡಿಲ್ಲ. ಆದ್ದರಿಂದ ಈ ಬಾರಿ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕು ಎಂಬ ಬೇಡಿಕೆ ಇದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular