ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ಸತತ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ಬುಧವಾರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಕಳೆದ ಮೂರೇ ದಿನಗಳಲ್ಲಿ ಹತ್ತು ಗ್ರಾಂ ಚಿನ್ನದ ದರ ಸುಮಾರು ₹5,000ರಷ್ಟು ಏರಿಕೆಯಾಗಿತ್ತು. ಆದರೆ ಇಂದು ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ₹270 ಇಳಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆ ಸ್ಥಿತಿ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್ಗೆ 17 ಡಾಲರ್ ಇಳಿದು 5,038 ಡಾಲರ್ಗೆ ತಲುಪಿದೆ. ಬೆಳ್ಳಿ ದರ ಶೇ.1.20ರಷ್ಟು ಕುಸಿದು ಪ್ರತಿ ಔನ್ಸ್ಗೆ 81.55 ಡಾಲರ್ ಮಟ್ಟದಲ್ಲಿ ವ್ಯವಹಾರವಾಗಿದೆ.
ಬೆಂಗಳೂರಲ್ಲಿ ಇಂದಿನ ಚಿನ್ನದ ದರ
ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹250 ಇಳಿಕೆಯಾಗಿದ್ದು, ₹1,45,300ಕ್ಕೆ ತಲುಪಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ದರ ಪ್ರತಿ 10 ಗ್ರಾಂಗೆ ₹270 ಇಳಿಕೆಯಾಗಿ ₹1,58,510 ಆಗಿದೆ.
ಭಾರತದಲ್ಲಿ ಇಂದಿನ ಚಿನ್ನದ ದರ ವಿವರ
1 ಗ್ರಾಂ (24K): ₹15,851 (₹27 ಇಳಿಕೆ)
8 ಗ್ರಾಂ: ₹1,26,808 (₹216 ಇಳಿಕೆ)
10 ಗ್ರಾಂ: ₹1,58,510 (₹270 ಇಳಿಕೆ)
100 ಗ್ರಾಂ: ₹15,85,100 (₹2,700 ಇಳಿಕೆ)
ಚಿನ್ನದ ದರ ಯಾವಾಗ ಇಳಿಕೆಯಾಗುತ್ತದೆ ಎಂದು ಕಾಯುತ್ತಿದ್ದವರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು. ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಉತ್ತಮ ಅವಕಾಶವೆಂದು ಮಾರುಕಟ್ಟೆ ವಲಯಗಳು ಹೇಳುತ್ತಿವೆ.
ಬೆಳ್ಳಿ ದರ
ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದರೂ, ಬೆಳ್ಳಿ ದರವು ಸದ್ಯಕ್ಕೆ ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಇಂದು ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿಯ ದರ ₹2.9 ಲಕ್ಷದ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಇಳಿಕೆಯ ಹಾದಿ ಹಿಡಿದಿರುವುದರಿಂದ, ದೇಶೀಯ ಮಾರುಕಟ್ಟೆಯಲ್ಲೂ ಮುಂದಿನ ದಿನಗಳಲ್ಲಿ ಬೆಳ್ಳಿ ದರ ಮತ್ತಷ್ಟು ತಗ್ಗಬಹುದು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿದೆ.
ಭಾರತದ ವಿವಿಧ ನಗರಗಳಲ್ಲಿ ಇಂದಿನ 24K ಚಿನ್ನದ ಬೆಲೆ
ನಗರ24K ಚಿನ್ನದ ಬೆಲೆ (ರೂ.)
ಚೆನ್ನೈ₹15,928
ದೆಹಲಿ₹15,866
ವಡೋದರಾ₹15,856
ಅಹಮದಾಬಾದ್₹15,856
ಬೆಂಗಳೂರು₹15,851
ಮುಂಬೈ₹15,851
ಕೋಲ್ಕತ್ತಾ₹15,851
ಹೈದರಾಬಾದ್₹15,851
ಕೇರಳ₹15,851
ಪುಣೆ₹15,851

