alex Certify ವಿಶ್ವಕಪ್ ಫೈನಲ್: ಭಾರಿ ಸಂಕಷ್ಟದಲ್ಲಿ ಭಾರತ ತಂಡ: ಆಸೀಸ್ ಮೇಲುಗೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವಕಪ್ ಫೈನಲ್: ಭಾರಿ ಸಂಕಷ್ಟದಲ್ಲಿ ಭಾರತ ತಂಡ: ಆಸೀಸ್ ಮೇಲುಗೈ

ಅಹಮದಾಬಾದ್ ನ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಂಕಷ್ಟಕ್ಕೆ ಸಿಲುಕಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ರೋಹಿತ್ ಶರ್ಮಾ 47, ಶುಭಮನ್ ಗಿಲ್ 4, ವಿರಾಟ್ ಕೊಹ್ಲಿ 54, ಶ್ರೇಯಸ್ ಅಯ್ಯರ್ 4, ಕೆ.ಎಲ್. ರಾಹುಲ್ 66, ರವೀಂದ್ರ ಜಡೇಜ 9, ಸೂರ್ಯ ಕುಮಾರ ಯಾದವ್ 14, ಮೊಹಮ್ಮದ್ ಶಮಿ 6, ಜಸ್ ಪ್ರೀತ್ ಬೂಮ್ರಾ 1, ಕುಲದೀಪ್ ಯಾದವ್ 2 ರನ್ ಗಳಿಸಿದರು.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 2 ವಿಕೆಟ್, ಜೋಶ್ ಹೇಜಲ್ ವುಡ್, ಗ್ಲೆನ್ ಮ್ಯಾಕ್ಸ್ ವೆಲ್, ಆಡಂ ಜಂಪ ತಲಾ 1 ವಿಕೆಟ್ ಪಡೆದರು.

30 ರನ್ ಗಳಿಸುವಷ್ಟರಲ್ಲಿ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡ ಭಾರತ 10.2 ಓವರ್ ಗಳಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿದ್ದು, 41.5 ಒವರ್ ಗಳಲ್ಲಿ 214 ರನ್ ಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...