alex Certify ಕೊಹ್ಲಿ ಸಾಧನೆಯನ್ನ ಕೊಂಡಾಡಿದ ವಿ.ವಿ.ಎಸ್. ಲಕ್ಷ್ಮಣ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ ಸಾಧನೆಯನ್ನ ಕೊಂಡಾಡಿದ ವಿ.ವಿ.ಎಸ್. ಲಕ್ಷ್ಮಣ್​​..!

ಏಕದಿನ ಪಂದ್ಯದಲ್ಲಿ 12 ಸಾವಿರ ರನ್​ಗಳನ್ನ ಪೂರೈಸಿದ ವಿರಾಟ್​ ಕೊಹ್ಲಿಯನ್ನ ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​ ಹಾಡಿ ಹೊಗಳಿದ್ದಾರೆ.

2008ರಲ್ಲಿ ಕ್ರಿಕೆಟ್​ ಲೋಕಕ್ಕೆ ಪಾದರ್ಪಣೆ ಮಾಡುವಾಗ ಕೊಹ್ಲಿ ಬಳಿ ಇದ್ದ ಎನರ್ಜಿಯೇ ಈಗಿನ ತನಕ ಇದೆ ಅಂತಾ ಲಕ್ಷ್ಮಣ್​ ಹೇಳಿದ್ದಾರೆ.

ಏಕದಿನ ಪಂದ್ಯದಲ್ಲಿ ವೇಗವಾಗಿ 12 ಸಾವಿರ ರನ್​​ ಗಳಿಸಿದ ಬ್ಯಾಟ್ಸಮನ್​ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕೊಹ್ಲಿ ಈ ಹೊಸ ಮೈಲಿಗಲನ್ನ ತಲುಪಿದ್ರು.

ಪ್ರತಿಯೊಂದು ಸರಣಿಯಲ್ಲೂ ಅವರು ಆಡಿದ ರೀತಿ, ಕಾಪಾಡಿಕೊಂಡ ಕ್ಷಮತೆ ಕೊಹ್ಲಿಗೆ ಈ ಸಾಧನೆ ಮಾಡಲು ಸಾಧ್ಯವಾಗುವಂತೆ ಮಾಡಿದೆ. ನನಗೆ ಹಲವು ಬಾರಿ ಕೊಹ್ಲಿಗೆ ಈ ಸಾಧನೆ ಮಾಡೋದು ಕಷ್ಟ ಎಂದು ಎನಿಸಿದ್ದು ಇದೆ. ಆದರೆ ಕ್ರಿಕೆಟ್​ ಮೈದಾನದಲ್ಲಿ ಕೊಹ್ಲಿಯ ಬ್ಯಾಟಿಂಗ್​ ವೈಖರಿ, ಎನರ್ಜಿಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...