alex Certify ಫಿಟ್ನೆಸ್ ಪರೀಕ್ಷೆಯಲ್ಲಿ ಈ ಆಟಗಾರ ಫೇಲ್: ಟೀಂ ಇಂಡಿಯಾಕ್ಕೆ ಎರಡು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್ನೆಸ್ ಪರೀಕ್ಷೆಯಲ್ಲಿ ಈ ಆಟಗಾರ ಫೇಲ್: ಟೀಂ ಇಂಡಿಯಾಕ್ಕೆ ಎರಡು ಶಾಕ್

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಟಿ-20 ಪಂದ್ಯಗಳ ಮೊದಲೇ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಸತತ ಎರಡನೇ ಬಾರಿಗೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಹಾಗಾಗಿ ಅವರು ಸರಣಿಯಿಂದ ಹೊರಗುಳಿದಿದ್ದಾರೆ.

ಮತ್ತೊಂದೆಡೆ, ಯಾರ್ಕರ್ ತಜ್ಞ ಟಿ ನಟರಾಜನ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರಂಭಿಕ ಪಂದ್ಯಗಳಲ್ಲಿ ಅವರು ಆಡುವುದು ಅನುಮಾನ. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಗೆ ಚಕ್ರವರ್ತಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಗಾಯದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು.

ಹಿಂದಿನ ಋತುವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ವರುಣ್ ಚಕ್ರವರ್ತಿ ಉತ್ತಮ ಪ್ರದರ್ಶನ ನೀಡಿದ್ದರು. ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದರು. ಸದ್ಯ ವರುಣ್ ಚಕ್ರವರ್ತಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದು, ಯೋ-ಯೋ ಪರೀಕ್ಷೆಯಲ್ಲಿ ಅವರು ಫೇಲ್ ಆಗಿದ್ದಾರೆ.

ಗ್ರಾಹಕರಿಗೆ ಗುಡ್ ನ್ಯೂಸ್: ಖಾತೆಯಲ್ಲಿನ ಹಣಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು SBI ಅವಕಾಶ

ಮಾಧ್ಯಮ ವರದಿಗಳ ಪ್ರಕಾರ, ರಾಹುಲ್ ಚಹರ್ ಗೆ ಟಿ 20 ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ರಾಹುಲ್ ಚಹರ್ ರನ್ನು ಈ ಹಿಂದೆ ಆಯ್ಕೆದಾರರು ಕಡೆಗಣಿಸಿದ್ದರು. ಆದರೆ ವರುಣ್ ಚಕ್ರವರ್ತಿ ಬದಲಿಗೆ ರಾಹುಲ್ ಚಹರ್ ಗೆ ತಂಡದಲ್ಲಿ ಜಾಗ ಸಿಗುವ ಸಾಧ್ಯತೆಯಿದೆ.

ಮೊದಲ ಟಿ-20 ಪಂದ್ಯ ಮಾರ್ಚ್ 12ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಮಾರ್ಚ್ 14ರಂದು, ಮೂರನೇ ಪಂದ್ಯ ಮಾರ್ಚ್ 16ರಂದು, ನಾಲ್ಕನೇ ಪಂದ್ಯ ಮಾರ್ಚ್ 18ರಂದು ಮತ್ತು ಕೊನೆ ಪಂದ್ಯ ಮಾರ್ಚ್ 20ರಂದು ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...