alex Certify ರಿಕಿ ಪಾಂಟಿಂಗ್​ ಭವಿಷ್ಯ ಉಲ್ಟಾ ಮಾಡಿದ ರಿಷಬ್​ ಪಂತ್​: ಟ್ರೋಲಿಗರ ಬಾಯಿಗೆ ಆಹಾರವಾದ್ರು ಆಸ್ಟ್ರೇಲಿಯಾ ಮಾಜಿ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಕಿ ಪಾಂಟಿಂಗ್​ ಭವಿಷ್ಯ ಉಲ್ಟಾ ಮಾಡಿದ ರಿಷಬ್​ ಪಂತ್​: ಟ್ರೋಲಿಗರ ಬಾಯಿಗೆ ಆಹಾರವಾದ್ರು ಆಸ್ಟ್ರೇಲಿಯಾ ಮಾಜಿ ನಾಯಕ

ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ದ್ವಿತೀಯ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 200 ರನ್​ನ್ನೂ ದಾಟಲ್ಲ ಎಂದಿದ್ದ ರಿಕಿ ಪಾಂಟಿಂಗ್​ ಇದೀಗ ಟ್ರೋಲಿಗರ ಬಾಯಿಗೆ ಬಾಡೂಟವಾಗಿದ್ದಾರೆ.

ಮೂರನೇ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 200ಕ್ಕೂ ಹೆಚ್ಚು ರನ್​ ಗಳಿಸುತ್ತಿದ್ದಂತೆಯೇ ಭಾರತೀಯ ನೆಟ್ಟಿಗರು ಪಾಂಟಿಂಗ್​ರನ್ನ ಟ್ರೋಲ್​ ಮೇಲೆ ಟ್ರೋಲ್​ ಮಾಡಿದ್ದಾರೆ.

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 244 ರನ್​ಗೆ ಆಲೌಟ್​ ಆಗಿತ್ತು. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತಕ್ಕೆ ಒಟ್ಟು 407 ರನ್​ಗಳ ಗುರಿ ಬೆನ್ನಟ್ಟುವ ಸವಾಲನ್ನ ನೀಡಿದೆ.

ಸೋಮವಾರ ಬೆಳಗ್ಗೆ 2 ವಿಕೆಟ್​ ನಷ್ಟಕ್ಕೆ 98 ರನ್​ ಮೂಲಕ ಇನ್ನಿಂಗ್ಸ್​ ಆರಂಭಿಸಿದ ಟೀಂ ಇಂಡಿಯಾ, ರಹಾನೆ ವಿಕೆಟ್​ ಕಳೆದುಕೊಂಡಿತು. ಇದಾದ ಬಳಿಕ​ ರಿಷಬ್​ ಪಂತ್​ ಸ್ಫೋಟಕ ಬ್ಯಾಟಿಂಗ್​ ಮೂಲಕ ಟೀಂ ಇಂಡಿಯಾ 200ರ ಗಡಿ ದಾಟುವಂತೆ ಮಾಡಿದ್ರು.

ಆದರೆ ಪ್ರಶ್ನೋತ್ತರ ಅವಧಿ ವೇಳೆ ಆಸ್ಟ್ರೇಲಿಯಾ ಬೌಲರ್​ಗಳ ದಾಳಿಗೆ ಟೀಂ ಇಂಡಿಯಾ 200 ರನ್​ ಗಳಿಸೋಕೂ ಸಾಧ್ಯವಿಲ್ಲ ಎಂದು ರಿಕಿ ಪಾಂಟಿಂಗ್​ ಹೇಳಿದ್ದರು. ಇದೀಗ ಭಾರತೀಯರು ರಿಕಿ ಪಾಂಟಿಂಗ್​​ರನ್ನ ಚೆನ್ನಾಗೇ ರೋಸ್ಟ್ ಮಾಡಿದ್ದಾರೆ.

— UrMiL07™ (@urmilpatel30) January 11, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...