alex Certify ಎದುರಾಳಿ ತಂಡದ ಯುವ ಕ್ರಿಕೆಟಿಗನಿಗೆ ಧೋನಿ ಟಿಪ್ಸ್: ಅಭಿಮಾನಿಗಳು ಫುಲ್ ಖುಷ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದುರಾಳಿ ತಂಡದ ಯುವ ಕ್ರಿಕೆಟಿಗನಿಗೆ ಧೋನಿ ಟಿಪ್ಸ್: ಅಭಿಮಾನಿಗಳು ಫುಲ್ ಖುಷ್​..!

ಶುಕ್ರವಾರ ನಡೆದ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ಪಂಜಾಬ್​ ಕಿಂಗ್ಸ್ ವಿರುದ್ಧ ಬರೋಬ್ಬರಿ 6 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಪಂದ್ಯ ಮುಗಿದ ಬಳಿಕ ಪಂಜಾಬ್​ ಕಿಂಗ್ಸ್​ ತಂಡದ ಆಟಗಾರ ಶಾರೂಖ್​ ಖಾನ್​ ಜೊತೆ ಕೂತ ಎಂ.ಎಸ್.​ ಧೋನಿ ಅವರಿಗೆ ಕೆಲ ಸಲಹೆಗಳನ್ನ ನೀಡಿದ್ದಾರೆ.

ಯುವ ಕ್ರಿಕೆಟಿಗನಿಗೆ ಸಲಹೆ ನೀಡುತ್ತಿರುವ ಧೋನಿಯ ಈ ಗುಣ ಕ್ರಿಕೆಟ್​ ಪ್ರಿಯರಿಗೆ ಅದರಲ್ಲೂ ವಿಶೇಷವಾಗಿ ಧೋನಿ ಅಭಿಮಾನಿಗಳಿಗೆ ಸಖತ್​ ಖುಷಿ ಕೊಟ್ಟಿದೆ.

ಪಂಜಾಬ್​ ಕಿಂಗ್ಸ್ ತಂಡದಲ್ಲಿ ಶಾರೂಖ್​ ಖಾನ್​ ಉತ್ತಮ ಪ್ರದರ್ಶನ ನೀಡಿದ್ದರು. 36 ಎಸೆತಗಳಿಗೆ ಶಾರೂಖ್​ ಖಾನ್​ 47 ರನ್​ಗಳನ್ನ ಸಿಡಿಸಿದ್ದಾರೆ. ನಾಲ್ಕು ಬೌಂಡರಿ ಹಾಗೂ 2 ಸಿಕ್ಸರ್​ ಸಿಡಿಸುವ ಮೂಲಕ ಪಂಜಾಬ್​ ಕಿಂಗ್ಸ್​ನ ಶಕ್ತಿಶಾಲಿ ಆಟಗಾರ ಎನಿಸಿಕೊಂಡಿದ್ದಾರೆ.

ಶಾರೂಖ್​ ಖಾನ್​ಗೆ ಧೋನಿ ಸಲಹೆ ನೀಡ್ತಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿಯ ಪ್ರತಿಕ್ರಿಯೆಗಳನ್ನ ಪಡೆದಿದೆ ನೋಡೋಣ ಬನ್ನಿ :

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...