alex Certify ತೂಕ ಇಳಿಸಿಕೊಳ್ಳಲು ಹೋದ ಯುವಕ ಸಾವು: ಶಸ್ತ್ರಚಿಕಿತ್ಸೆ ವೇಳೆಯೇ ಕೊನೆಯುಸಿರು: ತನಿಖೆಗೆ ಆದೇಶಿಸಿದ ತಮಿಳುನಾಡು ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಿಕೊಳ್ಳಲು ಹೋದ ಯುವಕ ಸಾವು: ಶಸ್ತ್ರಚಿಕಿತ್ಸೆ ವೇಳೆಯೇ ಕೊನೆಯುಸಿರು: ತನಿಖೆಗೆ ಆದೇಶಿಸಿದ ತಮಿಳುನಾಡು ಸರ್ಕಾರ

ಚೆನ್ನೈ: 150 ಕೆಜಿ ತೂಕದ 26 ವರ್ಷದ ವ್ಯಕ್ತಿಯೊಬ್ಬರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ತೂಕ ಇಳಿಸುವ ಶಸ್ತ್ರಚಿಕಿತ್ಸೆಯಿಂದ ಉಂಟಾದ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ.

ತಮಿಳುನಾಡು ಸರ್ಕಾರ ತನಿಖೆಗೆ ಆದೇಶಿದೆ. ಪುದುಚೇರಿಯ ಹೇಮಚಂದ್ರನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಪಮ್ಮಲ್‌ನ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ 9:30 ರಿಂದ ಚಯಾಪಚಯ ಮತ್ತು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಬೆಳಿಗ್ಗೆ 10:15 ರ ಸುಮಾರಿಗೆ ಅವರ ಹೃದಯ ಬಡಿತ ನಿಧಾನವಾದಾಗ ಶಸ್ತ್ರಚಿಕಿತ್ಸೆಗೆ ಅಡ್ಡಿಯಾಯಿತು, ತೀವ್ರ ನಿಗಾಗಾಗಿ ಕ್ರೋಮ್‌ ಪೇಟ್‌ ನಲ್ಲಿರುವ ಮತ್ತೊಂದು ಆಸ್ಪತ್ರೆಗೆ ಅವರನ್ನು ವರ್ಗಾಯಿಸಲಾಗಿದೆ. ರಾತ್ರಿ ವೇಳೆಗೆ ಅವರು ಸಾವನ್ನಪ್ಪಿದ್ದಾರೆ.

ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್ ಖುದ್ದಾಗಿ ಹೇಮಚಂದ್ರನ್ ಅವರ ಪೋಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ಹೇಳಿದರು. ಅವರ ಮಗನ ಅಕಾಲಿಕ ಮರಣದ ಬಗ್ಗೆ ಸಮಗ್ರ ತನಿಖೆಯ ಭರವಸೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...