alex Certify ಕೇರಳ: ಮರಡೋನಾ ತಂಗಿದ್ದ ಕೋಣೆ ಈಗ ಮ್ಯೂಸಿಯಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳ: ಮರಡೋನಾ ತಂಗಿದ್ದ ಕೋಣೆ ಈಗ ಮ್ಯೂಸಿಯಂ

ಎಂಟು ವರ್ಷಗಳ ಹಿಂದೆ ಕೇರಳಕ್ಕೆ ಭೇಟಿ ಕೊಟ್ಟಿದ್ದ ಡಿಯಾಗೋ ಮರಡೋನಾ ಕಣ್ಣೂರಿನ ಹೊಟೇಲೊಂದರಲ್ಲಿ ತಂಗಿದ್ದರು. ಇದೀಗ ಆ ಹೋಟೇಲ್‌ನ ಕೋಣೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.

ಬುಧವಾರ ನಿಧನರಾದ 60 ವರ್ಷದ ಫುಟ್ಬಾಲ್ ದಂತಕಥೆ, 2012ರಲ್ಲಿ ಕೇರಳಕ್ಕೆ ಭೇಟಿ ಕೊಟ್ಟ ವೇಳೆ ಕಣ್ಣೂರಿನ ಬ್ಲೂ ನೈಲ್ ಹೊಟೇಲ್‌ನಲ್ಲಿ ತಂಗಿದ್ದರು. ಬಳಿಕ ಆ ಕೋಣೆಯನ್ನು ಮರಡೋನಾ ಸೂಟ್ ಎಂದು ಮರುನಾಮಕರಣ ಮಾಡಲಾಗಿತ್ತು.

ಅಕ್ಟೋಬರ್‌ 23, 2012ರಲ್ಲಿ ಕೇರಳಕ್ಕೆ ಭೇಟಿ ಕೊಟ್ಟಿದ್ದ ಮರಡೋನಾ ಇದೇ ಕೋಣೆಯಲ್ಲಿ ಎರಡು ದಿನಗಳ ಮಟ್ಟಿಗೆ ತಂಗಿದ್ದರು. ಆ ವೇಳೆ ಮರಡೋನಾ ಬಳಸಿದ್ದ ಎಲ್ಲ ವಸ್ತುಗಳನ್ನೂ ಸಹ ಅವರ ನೆನಪಿನಲ್ಲಿ ಈಗ ಮ್ಯೂಸಿಯಂ ಆಗಿರುವ ಈ ಕೋಣೆಯಲ್ಲಿ ಇಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...