alex Certify BREAKING NEWS: 14 ಕ್ಷೇತ್ರಗಳಲ್ಲಿ ಈವರೆಗೆ ಶೇ.9.21ರಷ್ಟು ಮತದಾನ; ದಕ್ಷಿಣ ಕನ್ನಡದಲ್ಲಿ ಅತಿಹೆಚ್ಚು ವೋಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: 14 ಕ್ಷೇತ್ರಗಳಲ್ಲಿ ಈವರೆಗೆ ಶೇ.9.21ರಷ್ಟು ಮತದಾನ; ದಕ್ಷಿಣ ಕನ್ನಡದಲ್ಲಿ ಅತಿಹೆಚ್ಚು ವೋಟಿಂಗ್

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಬೆಳಿಗ್ಗೆ 9 ಗಂಟೆಯವರೆಗೆ 14 ಕ್ಷೇತ್ರಗಳಲ್ಲಿ ಶೇಕಡಾ 9.21ರಷ್ಟು ಮತದಾನವಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದೆ. ದಕ್ಷಿಣಕನ್ನಡದಲ್ಲಿ ಈವರೆಗೆ ಶೇ.14.33ರಷ್ಟು ಮತದಾನವಾಗಿದೆ.

ಬೆಂಗಳೂರು ಕೇಂದ್ರ ಶೇ.8.14, ಬೆಂಗಳೂರು ಉತ್ತರ ಶೇ.8.64, ಬೆಂಗಳೂರು ಗ್ರಾಮಾಂತರ ಶೇ.8.39, ಬೆಂಗಳೂರು ದಕ್ಷಿಣ ಶೇ.9.8ರಷ್ಟು ಮತದಾನವಾಗಿದೆ.

ಮೈಸೂರು ಶೇ.11.1, ಉಡುಪಿ-ಚಿಕ್ಕಮಗಳೂರು ಶೇ.12.82ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...