alex Certify ಭಾರತ-ಇಂಗ್ಲೆಂಡ್ ಟೆಸ್ಟ್: ಚೆನ್ನೈ ತಲುಪಿದ ರಹಾನೆ, ಶರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ-ಇಂಗ್ಲೆಂಡ್ ಟೆಸ್ಟ್: ಚೆನ್ನೈ ತಲುಪಿದ ರಹಾನೆ, ಶರ್ಮಾ

ಭಾರತ-ಇಂಗ್ಲೆಂಡ್ ಮಧ್ಯೆ ಫೆಬ್ರವರಿ 5ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಟೀಂ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ, ವೇಗದ ಬೌಲರ್ ಶಾರ್ದುಲ್ ಠಾಕೂರ್, ಬ್ಯಾಟ್ಸ್ ಮೆನ್ ರೋಹಿತ್ ಶರ್ಮಾ ಈಗಾಗಲೇ ಚೆನ್ನೈ ತಲುಪಿದ್ದಾರೆ. ಮುಂಬೈನಿಂದ ಚೆನ್ನೈಗೆ ಬಂದಿಳಿದ ರಹಾನೆ, ಶಾರ್ದುಲ್ ಮತ್ತು ಶರ್ಮಾ ನೇರವಾಗಿ ಹೊಟೇಲ್ ತಲುಪಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಉಳಿದ ಸದಸ್ಯರು ಇಂದು ಚೆನ್ನೈ ತಲುಪಲಿದ್ದಾರೆ. ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಮೊಯಿನ್ ಅಲಿ ಚೆನ್ನೈ ತಲುಪಿದ್ದಾರೆ. ಉಳಿದ ಇಂಗ್ಲೆಂಡ್ ಆಟಗಾರರು ಬುಧವಾರ ಚೆನ್ನೈಗೆ ಬರಲಿದ್ದಾರೆ. ತಂಡದ ಆಟಗಾರರು ಶ್ರೀಲಂಕಾದಿಂದ ಚೆನ್ನೈಗೆ ಬರಲಿದ್ದಾರೆ. ಸೋಮವಾರ ಇಂಗ್ಲೆಂಡ್ ತಂಡ, ಶ್ರೀಲಂಕಾವನ್ನು ಮಣಿಸಿದೆ. ಹೊಟೇಲ್ ನಲ್ಲಿ ಬಯೋ ಬಬಲ್ ನಲ್ಲಿ ಆಟಗಾರರು ಇರಲಿದ್ದಾರೆ.

ಫೆಬ್ರವರಿಯಲ್ಲಿ ಆಟಗಾರರು ಅಭ್ಯಾಸ ಶುರು ಮಾಡಲಿದ್ದಾರೆ. ಮೊದಲ ಟೆಸ್ಟ್ ಚೆನ್ನೈನಲ್ಲಿ ಫೆಬ್ರವರಿ 5ರಿಂದ ನಡೆಯಲಿದೆ. ಎರಡನೇ ಟೆಸ್ಟ್ ಫೆಬ್ರವರಿ 13ರಿಂದ ಶುರುವಾಗಲಿದೆ. ಮೂರನೇ ಟೆಸ್ಟ್ ಫೆಬ್ರವರಿ 24 ರಿಂದ ನಡೆಯಲಿದೆ. ಕೊನೆಯ ಟೆಸ್ಟ್ ಮಾರ್ಚ್ 4ರಿಂದ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...