alex Certify BIG BREAKING: ಮೊದಲ ಇನಿಂಗ್ಸ್ ನಲ್ಲಿ ಮುಗ್ಗರಿಸಿ ಬಿದ್ದ ಭಾರತ ಕೇವಲ 78 ರನ್ ಗೆ ಆಲೌಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮೊದಲ ಇನಿಂಗ್ಸ್ ನಲ್ಲಿ ಮುಗ್ಗರಿಸಿ ಬಿದ್ದ ಭಾರತ ಕೇವಲ 78 ರನ್ ಗೆ ಆಲೌಟ್

ಲೀಡ್ಸ್: ಲೀಡ್ಸ್ ನ ಹೆಡಿಂಗ್ಲೆ ಮೈದಾದನದಲ್ಲಿ ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ಕೇವಲ 78 ರನ್ ಗಳಿಗೆ ಆಲೌಟ್ ಆಗಿದೆ.

ಮೂವರು ಸೊನ್ನೆ ಸುತ್ತಿದ್ದು, ಇಬ್ಬರು ಮಾತ್ರ ಎರಡಂಕಿ ದಾಟಿದ್ದಾರೆ. ರೋಹಿತ್ ಶರ್ಮ 19, ಕೆಎಲ್ ರಾಹುಲ್ 0, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯಾ ರಹಾನೆ 18, ರಿಷಬ್ ಪಂತ್ 2, ರವೀಂದ್ರ ಜಡೇಜ 4, ಮೊಹಮದ್ ಶಮಿ 0, ಇಶಾಂತ್ ಶರ್ಮಾ ಅಜೇಯ 8, ಜಸ್ಪ್ರೀತ್ ಬುಮ್ರಾ 0, ಹಾಗೂ ಮೊಹಮ್ಮದ್ ಸಿರಾಜ್ 3 ರನ್ ಗಳಿಸಿದ್ದಾರೆ.

ಇಂಗ್ಲೆಂಡ್ ಪರವಾಗಿ ಮಾರಕ ದಾಳಿ ನಡೆಸಿದ ಜೇಮ್ಸ್ ಆಂಡರ್ಸನ್ 3, ಕ್ರೇಗ್ ಓವರ್ ಟನ್ 3, ಒಲಿ ರಾಬಿನ್ಸನ್ 2, ಸ್ಯಾಮ್ ಕರ್ರನ್ 2 ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...