alex Certify BIG BREAKING: 2 ನೇ ಟೆಸ್ಟ್ ನಲ್ಲೂ ಜಯ, 238 ರನ್ ಗಳಿಂದ ಶ್ರೀಲಂಕಾ ಮಣಿಸಿದ ಭಾರತಕ್ಕೆ ಸರಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: 2 ನೇ ಟೆಸ್ಟ್ ನಲ್ಲೂ ಜಯ, 238 ರನ್ ಗಳಿಂದ ಶ್ರೀಲಂಕಾ ಮಣಿಸಿದ ಭಾರತಕ್ಕೆ ಸರಣಿ

ಬೆಂಗಳೂರು: ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 238 ರನ್ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಗೆಲ್ಲುವುದರೊಂದಿಗೆ ಭಾರತ ಸರಣಿ ಜಯಿಸಿದೆ.

ಎರಡನೇ ಇನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 59.3 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತು. ದಿಮುತ್ ಕರುಣರತ್ನೆ 107, ಕುಶಾಲ್ ಮೆಂಡಿಸ್ 54, ನಿರೋಶನ್ ಡಿಕೆಲ್ವ 12 ಹೊರತುಪಡಿಸಿ ಉಳಿದವರು ಒಂದಂಕಿ ದಾಟಲಿಲ್ಲ.

ಭಾರತದ ಪರವಾಗಿ ಜಸ್ ಪ್ರೀತ್ ಬೂಮ್ರಾ 3, ರವಿಚಂದ್ರನ್ ಅಶ್ವಿನ್ 4, ರವೀಂದ್ರ ಜಡೇಜ 1, ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು.

ಸ್ಕೋರ್ ವಿವರ:

ಭಾರತ: ಮೊದಲ ಇನಿಂಗ್ಸ್ 252/10(59.1 ಓವರ್), ಎರಡನೇ ಇನಿಂಗ್ಸ್ 303/9(68.5 ಓವರ್)

ಶ್ರೀಲಂಕಾ: ಮೊದಲ ಇನಿಂಗ್ಸ್ ಶ್ರೀಲಂಕಾ 109/10(35.5 ಓವರ್), ಎರಡನೇ ಇನಿಂಗ್ಸ್ 208/10(59.3 ಓವರ್)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...