alex Certify ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ…! ಬ್ರಿಸ್ಬೇನ್​ ಟೆಸ್ಟ್​ಗೆ ಹೊಸ ಆಟಗಾರರನ್ನ ಹುಡುಕಿದ ಫ್ಯಾನ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ…! ಬ್ರಿಸ್ಬೇನ್​ ಟೆಸ್ಟ್​ಗೆ ಹೊಸ ಆಟಗಾರರನ್ನ ಹುಡುಕಿದ ಫ್ಯಾನ್ಸ್….!

Desi Cricket Fans Want to Send 'Lagaan' Squad for Brisbane Test to Rescue  Injured Team Indiaಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ನಾಲ್ಕನೇ ಟೆಸ್ಟ್​ ಪಂದ್ಯಕ್ಕೆ ಬ್ಯಾಟ್ಸಮನ್​ ಹನುಮ ವಿಹಾರಿ ಅಲಭ್ಯರಾಗ್ತಾರೆ ಎಂಬ ವಿಚಾರ ಹೊರಬಿದ್ದಿರುವ ಬೆನ್ನಲ್ಲೇ ಇದೀಗ ಆಲ್​ರೌಂಡರ್​ ರವೀಂದ್ರ್ರ ಜಡೇಜಾ ಕೂಡ ಕೊನೆಯ ಟೆಸ್ಟ್ ಆಡುತ್ತಿಲ್ಲ ಎಂಬ ವಿಚಾರ ಸ್ಪಷ್ಟವಾಗಿದೆ. ಮೂರನೇ ಟೆಸ್ಟ್​ ಪಂದ್ಯದ ವೇಳೆ ಜಡೇಜಾ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ರು.

ಇತ್ತ ಕಿಬ್ಬೊಟ್ಟೆಯ ಒತ್ತಡದಿಂದ ಬಳಲುತ್ತಿರುವ ಜಸ್ಪ್ರೀತ್​ ಬೂಮ್ರಾ ಕೂಡ ನಾಲ್ಕನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಟೀಂ ಇಂಡಿಯಾ ಗಾಯಾಳುಗಳ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತಲೇ ಇದ್ದು ಬ್ರಿಸ್ಬೇನ್​ ಟೆಸ್ಟ್ ಕತೆ ಏನು ಅಂತಾ ಎಲ್ಲರೂ ತಲೆ ಕೆಡಿಸಿಕೊಳ್ಳುವಂತಾಗಿದೆ.

ಇನ್ನು ಪ್ರತಿದಿನ ಒಂದೊಂದೇ ಆಟಗಾರರು ಬ್ರಿಸ್ಪೇನ್​ ಟೆಸ್ಟ್​ನಿಂದ ಹೊರಬೀಳ್ತಾ ಇರೋದ್ರಿಂದ ಟೀಂ ಇಂಡಿಯಾ ಅಭಿಮಾನಿಗಳು ಹೊಸ ಪ್ಲಾನ್​ ಒಂದನ್ನ ಮಾಡಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾವನ್ನ ಕಾಪಾಡೋಕೆ ಲಗಾನ್​ ಸಿನಿಮಾದ ಕ್ರಿಕೆಟ್​ ತಂಡವನ್ನ ಕಳಿಸಿದ್ರೆ ಹೇಗೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.

— Garv Hindu Hone Pe ?? (@GarvPe) January 12, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...