alex Certify ಜಸ್ಪ್ರೀತ್‌ ಬುಮ್ರಾ ಮದುವೆಗೆ ಸಖತ್‌ ಗ್ರೀಟಿಂಗ್ ಕೊಟ್ಟ ʼಅಮೂಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಸ್ಪ್ರೀತ್‌ ಬುಮ್ರಾ ಮದುವೆಗೆ ಸಖತ್‌ ಗ್ರೀಟಿಂಗ್ ಕೊಟ್ಟ ʼಅಮೂಲ್ʼ

ಪ್ರಚಲಿತದಲ್ಲಿರುವ ಸುದ್ದಿಗಳ ಮೇಲೆ ವಿನೋದದ ಕಾರ್ಟೂನ್‌ಗಳನ್ನು ಮಾಡುವಲ್ಲಿ ಅಮೂಲ್‌ಗೆ ಯಾರೂ ಸಾಟಿ ಇಲ್ಲ. ದೇಶದ ಬೆಸ್ಟ್‌ ಜಾಹೀರಾತುಗಳಲ್ಲಿ ಒಂದಾದ ಅಮೂಲ್‌ ಕಳೆದ ಕೆಲವು ದಶಕಗಳಿಂದ ಅನೇಕ ಮಾಸ್ಟರ್‌ಪೀಸ್‌ ಕಾರ್ಟೂನ್‌ಗಳನ್ನು ತಂದಿದೆ.

ಇದೀಗ ಕ್ರಿಕೆಟಿಗ ಜಸ್ಪ್ರೀತ್‌ ಬುಮ್ರಾ ಹಾಗೂ ಸಂಜನಾ ಗಣೀಶನ್‌ಗೂ ಸಹ ಇಂಥದ್ದೇ ಒಂದು ಕ್ರಿಯೇಟಿವ್‌ ಶುಭ ಹಾರೈಕೆಯನ್ನು ತಂದಿದೆ ಅಮೂಲ್. ’ಜಸ್‌ಗೆ ಪ್ರೀತಿ ಸಿಕ್ಕಿದೆ,” ಎಂಬ ಕ್ಯಾಚೀ ಕ್ಯಾಪ್ಷನ್ ಮೂಲಕ ಈ ಜಾಹೀರಾತು ಸಖತ್‌ ಸದ್ದು ಮಾಡುತ್ತಿದೆ.

ಬಾಲಕಿ ಕೊಟ್ಟ ʼಪಂಚ್ʼ‌ ಗೆ ಜಾಲತಾಣ ಬಳಕೆದಾರರು ಫಿದಾ

ವಾರಗಳ ಮಟ್ಟಿಗೆ ಅಂತೆ-ಕಂತೆಗಳು ಕೇಳಿ ಬಂದ ಬಳಿಕ ಜಸ್ಪ್ರೀತ್‌ ಕೊನೆಗೂ ಸಂಜನಾರನ್ನು ಗೋವಾದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ವರಿಸಿದ್ದಾರೆ. ಸಮಾರಂಭಕ್ಕೆ ಬುಮ್ರಾ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರು ಮಾತ್ರವೇ ಹಾಜರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...