alex Certify ಟ್ವಿಟರ್​ನಲ್ಲಿ ಸಂತಸ ಹಂಚಿಕೊಂಡ ಟೀಂ ಇಂಡಿಯಾ ವೇಗಿ ಟಿ. ನಟರಾಜನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲಿ ಸಂತಸ ಹಂಚಿಕೊಂಡ ಟೀಂ ಇಂಡಿಯಾ ವೇಗಿ ಟಿ. ನಟರಾಜನ್

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸರಣಿ ಸೋಲನ್ನ ಅನುಭವಿಸಿದ್ದ ಟೀಂ ಇಂಡಿಯಾ ಇದೀಗ ಟಿ 20 ಸರಣಿಯ ಮೊದಲ ಎರಡು ಪಂದ್ಯಗಳನ್ನ ಗೆಲ್ಲುವ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ. ಐಪಿಎಲ್​​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬಳಿಕ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಟಿ. ನಟರಾಜನ್​ ಪ್ರದರ್ಶನ ಎಲ್ಲರ ಮನಗೆದ್ದಿದೆ.

ಟೀಂ ಇಂಡಿಯಾ ತಂಡದ ಸದಸ್ಯನಾಗಿ ಟಿ 20 ಸರಣಿ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಟಿ. ನಟರಾಜನ್​ ಟ್ವಿಟರ್​ನಲ್ಲಿ ತಮ್ಮ ಸಂತಸವನ್ನ ಹೊರಹಾಕಿದ್ದಾರೆ. ಟೀಂ ಇಂಡಿಯಾ ಜೊತೆಗಿನ ನನ್ನ ಮೊದಲ ಪ್ರವಾಸ ಇದಾಗಿತ್ತು, ನಾವು ಟಿ 20 ಸರಣಿಯನ್ನ ಗೆದ್ದಿದ್ದೇವೆ. ಈ ಮೂಲಕ ನನ್ನ ಕನಸು ನನಸಾದಂತಾಗಿದೆ. ನಮ್ಮ ತಂಡದ ಆಟಗಾರರ ನಿರಂತರ ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ನಾನು ಧನ್ಯವಾದ ಅರ್ಪಿಸುವೆ ಎಂದು ಬರೆದುಕೊಂಡಿದ್ದಾರೆ.
ಎಡಗೈ ವೇಗಿ ಟಿ. ನಟರಾಜನ್​ 2020ರ ಐಪಿಎಲ್​ ಆವೃತ್ತಿಯಲ್ಲಿ ಹೈದರಾಬಾದ್​ ತಂಡವನ್ನ ಪ್ರತಿನಿಧಿಸಿದ್ದರು. ಐಪಿಎಲ್​ ಭರ್ಜರಿ ಪ್ರದರ್ಶನ ನೀಡಿದ ಕಾರಣ ಗಾಯಾಳು ಭುವನೇಶ್ವರ್​ ಕುಮಾರ್​ ಜಾಗಕ್ಕೆ ನಟರಾಜನ್​ರನ್ನ ಸೇರಿಸಿಕೊಳ್ಳಲಾಗಿತ್ತು. ಸಿಕ್ಕ ಅವಕಾಶವನ್ನ ಸೂಕ್ತವಾಗಿ ಬಳಸಿಕೊಂಡ ನಟರಾಜನ್​ ಎರಡನೇ ಪಂದ್ಯದಲ್ಲಿ ಎರಡು ವಿಕೆಟ್​ ಸೇರಿದಂತೆ ಸಂಪೂರ್ಣ ಸರಣಿಯಲ್ಲಿ 6 ವಿಕೆಟ್​ ಪಡೆದಿದ್ದು ಮಾತ್ರವಲ್ಲದೇ ಎದುರಾಳಿ ತಂಡಕ್ಕೆ ರನ್​ ಗಳಿಸಲು ಸಾಧ್ಯವಾಗದಂತೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು.

— Natarajan (@Natarajan_91) December 9, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...