alex Certify ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ 3-1 ಅಂತರದಿಂದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ 3-1 ಅಂತರದಿಂದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ

ರಾಯಪುರ: ನಾಲ್ಕನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 20 ರನ್ ಗಳ ಜಯಗಳಿಸಿದ್ದು, ಇನ್ನೊಂದು ಬಾಕಿ ಇರುವಂತೆಯೇ 3 -1 ಅಂತರದಲ್ಲಿ ಸರಣಿ ಜಯಿಸಿದೆ.

ಅನೇಕ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಯುವಪಡೆ ಟಿ20 ಸರಣಿ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ರಿಂಕು 46, ಜೈಸ್ವಾಲ್ 37 ರನ್ ಗಳಿಸಿದರು. ಸಿಂಗ್ 29 ಎಸೆತಗಳಲ್ಲಿ 46 ರನ್ ಸಿಡಿಸಿದರು. ಜಿತೇಶ್ ಶರ್ಮ 19 ಎಸೆತಗಳಲ್ಲಿ 35 ರನ್ ಗಳಿಸಿದರು. ಕೊನೆಯ ಎರಡು ಓವರ್ ಗಳಲ್ಲಿ ಕೇವಲ 13 ರನ್ ಗೆ ಐದು ವಿಕೆಟ್ ಗಳನ್ನು ಕಳೆದುಕೊಂಡಿತು. ಆಸ್ಟ್ರೇಲಿಯಾ ಪರ ದ್ವಾರ್ಷಿಯಸ್ 3 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ಗೆ 154 ರನ್ ಗಳಿಸಿ ಸೋಲು ಕಂಡಿತು. ವೇಡ್ 36, ಹೆಡ್ 31 ರನ್ ಗಳಿಸಿದರು. ಭಾರತದ ಪರ ಅಕ್ಷರ್ 3 ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...