alex Certify ಕ್ರಿಕೆಟ್‌ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ: ಯುಎಇನಲ್ಲಿ ಐಪಿಎಲ್​ ಪಂದ್ಯಾವಳಿ ನಡೆಯುವ ಕುರಿತು BCCI ನಿಂದ ಅಧಿಕೃತ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್‌ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ: ಯುಎಇನಲ್ಲಿ ಐಪಿಎಲ್​ ಪಂದ್ಯಾವಳಿ ನಡೆಯುವ ಕುರಿತು BCCI ನಿಂದ ಅಧಿಕೃತ ಘೋಷಣೆ

ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾದ ಬಳಿಕ ಮೇ 4ರಂದು ಮುಂದೂಡಲ್ಪಟ್ಟಿದ್ದ 2021ನೇ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ ಯುಎಇನಲ್ಲಿನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಅಧಿಕೃತ ಹೇಳಿಕೆ ನೀಡಿದ್ದಾರೆ.

ಬಯೋಬಬಲ್​ ನಿಯಮ ಉಲ್ಲಂಘನೆಯಾದ ಕಾರಣ ಆಟಗಾರರ ಸುರಕ್ಷತೆಯನ್ನ ಗಮನದಲ್ಲಿರಿಸಿ ಬಿಸಿಸಿಐ ಹಾಗೂ ಐಪಿಎಲ್​ ಆಡಳಿತ ಮಂಡಳಿ ಸರ್ವಾನುಮತದಿಂದ ಐಪಿಎಲ್​ ಸೀಸನ್​ನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ನಿರ್ಧಾರಕ್ಕೆ ಬಂದಿತ್ತು.

ಮೇ 4ರಂದು ಐಪಿಎಲ್​ ಮುಂದೂಡಿಕೆ ಎಂಬ ಘೋಷಣೆ ಹೊರಡುತ್ತಿದ್ದಂತೆಯೇ 2021ನೇ ಸಾಲಿನ ಉಳಿದ ಐಪಿಎಲ್​ ಪಂದ್ಯಾವಳಿ ಎಲ್ಲಿ ನಡೆಯುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು.

ಈ ಸಂಬಂಧ ವಿಶೇಷ ಸಭೆ ನಡೆಸಿದ ಬಿಸಿಸಿಐ ಇದೀಗ ಐಪಿಎಲ್​ 2021ನೇ ಆವೃತ್ತಿಯ ದ್ವಿತೀಯಾರ್ಧವನ್ನ ಯುಎಇನಲ್ಲಿ ನಡೆಸಲು ತೀರ್ಮಾನಿಸಿದೆ. 2020ನೇ ಸಾಲಿನ ಐಪಿಎಲ್​ ಪಂದ್ಯಾವಳಿ ಸಹ ಯುಎಇನಲ್ಲೇ ನಡೆದಿತ್ತು.

ಸೆಪ್ಟೆಂಬರ್​ 19 ರಿಂದ ಅಕ್ಟೋಬರ್​ 10ರವರೆಗೆ ಐಪಿಎಲ್​ ಪಂದ್ಯಾವಳಿಗಳು ನಡೆಯಲಿವೆ. ದ್ವಿತೀಯಾರ್ಧದಲ್ಲಿ 31 ಐಪಿಎಲ್​ ಪಂದ್ಯಗಳು ನಡೆಯಬೇಕಿದ್ದು ಇವುಗಳನ್ನ 10 ಡಬಲ್​ ಹೆಡ್ಡರ್ಸ್​, 7 ಸಿಂಗಲ್​ ಹೆಡ್ಡರ್ಸ್, 4 ಪ್ಲೇಆಫ್ಸ್​ಗಳಾಗಿ ವಿಂಗಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...