alex Certify ಜೊಮ್ಯಾಟೋ ಡೆಲವರಿ ಬಾಯ್​ ಗಳಿಗಾಗಿ ʼರೆಸ್ಟ್​ ಪಾಯಿಂಟ್ʼ​ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೊಮ್ಯಾಟೋ ಡೆಲವರಿ ಬಾಯ್​ ಗಳಿಗಾಗಿ ʼರೆಸ್ಟ್​ ಪಾಯಿಂಟ್ʼ​ ಶುರು

ಆನ್‌ಲೈನ್ ಆಹಾರ ವಿತರಣಾ ವೇದಿಕೆ ಜೊಮ್ಯಾಟೊ ತನ್ನ ಕಂಪೆನಿಯಲ್ಲಿ ಕೆಲಸ ನಿರ್ವಹಿಸುವ ಡೆಲಿವರಿ ಬಾಯ್​ಗಳ ಹಿತದೃಷ್ಟಿಯಿಂದ ಅವರ ವಿಶ್ರಾಂತಿಗಾಗಿ ‘ರೆಸ್ಟ್ ಪಾಯಿಂಟ್’ ಸ್ಥಾಪನೆ ಮಾಡಿದೆ. ಈ ಮೂಲಕ ಡೆಲಿವರಿ ಬಾಯ್​ಗಳಿಗೆ ಮೂಲಸೌಕರ್ಯವನ್ನು ನಿರ್ಮಿಸಲಾಗುತ್ತಿದೆ ಎಂದು ಕಂಪೆನಿ ಹೇಳಿದೆ.

ಕಂಪೆನಿಯ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗುರುಗ್ರಾಮದಲ್ಲಿ ಈಗಾಗಲೇ ಎರಡು ‘ರೆಸ್ಟ್ ಪಾಯಿಂಟ್‌ʼಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಡೆಲವರಿ ಏಜೆಂಜ್​ಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ಕೇಂದ್ರಗಳನ್ನು ಶುರು ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ರೆಸ್ಟ್ ಪಾಯಿಂಟ್‌ಗಳಲ್ಲಿ ಶುದ್ಧ ಕುಡಿಯುವ ನೀರು, ಫೋನ್-ಚಾರ್ಜಿಂಗ್ ಸ್ಟೇಷನ್‌ಗಳು, ವಾಷ್​ ರೂಮ್‌ಗಳು ಇರಲಿವೆ. ಅಷ್ಟೇ ಅಲ್ಲದೇ ಹೈ-ಸ್ಪೀಡ್ ಇಂಟರ್ನೆಟ್, 24/7 ಹೆಲ್ಪ್‌ಡೆಸ್ಕ್ ಮತ್ತು ಪ್ರಥಮ ಚಿಕಿತ್ಸಾ ಘಟಕಗಳೂ ಇರುತ್ತವೆ ಎಂದು ಅವರು ತಿಳಿಸಿದ್ದಾರೆ. ಆದರೆ ಇದನ್ನು ಎಷ್ಟು ನಗರಗಳಲ್ಲಿ, ಎಷ್ಟು ಸಂಖ್ಯೆಗಳಲ್ಲಿ ಇದನ್ನು ಆರಂಭಿಸಲಾಗುವುದು ಎಂಬ ಮಾಹಿತಿ ನೀಡಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...