alex Certify ನಾಗರಿಕ ಸೇವಾ ಆಯೋಗದ ಪರೀಕ್ಷೆ ಪಾಸ್​ ಮಾಡಿದ ಝೊಮ್ಯಾಟೋ ಡೆಲಿವರಿ ಬಾಯ್ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗರಿಕ ಸೇವಾ ಆಯೋಗದ ಪರೀಕ್ಷೆ ಪಾಸ್​ ಮಾಡಿದ ಝೊಮ್ಯಾಟೋ ಡೆಲಿವರಿ ಬಾಯ್ !

ಝೊಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್​ ಆಗಿ ಕೆಲಸ ಮಾಡುತ್ತಿರುವ ತಮಿಳುನಾಡಿನ ನಿವಾಸಿ ವಿಘ್ನೇಶ್​ ಎಂಬವರು ತಮಿಳುನಾಡು ಪಬ್ಲಿಕ್​ ಸರ್ವೀಸ್​ ಕಮಿಷನ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಎಲ್ಲರಿಗೆ ಮಾದರಿ ಎನಿಸಿದ್ದಾರೆ.

ಫುಡ್​ ಡೆಲಿವರಿ ಎಕ್ಸಿಕ್ಯೂಟಿವ್​ ವಿಘ್ನೇಶ್​​​ ತಮ್ಮ ಕುಟುಂಬದ ಜೊತೆಯಲ್ಲಿರುವ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಫೋಟೋಗೆ ಅನೇಕರು ತಮ್ಮ ಪ್ರೀತಿಯನ್ನು ಲೈಕ್​ ಮೂಲಕ ನೀಡಿದ್ದಾರೆ.

ಝೊಮ್ಯಾಟೋ ಅಧಿಕೃತ ಟ್ವಿಟರ್​ ಹ್ಯಾಂಡಲ್​​​ನಲ್ಲಿ ಈ ಫೋಟೋವನ್ನು ಶೇರ್​ ಮಾಡಲಾಗಿದ್ದು ಝೊಮ್ಯಾಟೋ ಕಂಪನಿಯ ಡೆಲಿವರಿ ಎಕ್ಸಿಕ್ಯೂಟಿವ್​ನ ಈ ಸಾಧನೆ ಕಂಡು ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್​ ಮಾಡಿರುವ ಝೊಮ್ಯಾಟೋ, ಜೊಮ್ಯಾಟೋ ಡೆಲಿವರಿ ಪಾರ್ಟ್ನರ್​ ಆಗಿ ಕೆಲಸ ಮಾಡುತ್ತಿದ್ದಾಗಲೇ ವಿಘ್ನೇಶ್​ ತಮಿಳುನಾಡು ಪಬ್ಲಿಕ್​ ಸರ್ವಿಸ್​ ಪರೀಕ್ಷೆ ಉತ್ತೀರ್ಣರಾಗಿದ್ದಾರೆ ಎಂದು ಶೀರ್ಷಿಕೆ ನೀಡಿದೆ.

ಜೊಮ್ಯಾಟೋ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಲಾದ ಈ ಪೋಸ್ಟ್​​ಗೆ ಸಾಕಷ್ಟು ಲೈಕ್ಸ್​, ಕಮೆಂಟ್​​ಗಳು ಹರಿದು ಬರ್ತಿದೆ. ಕಠಿಣ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. .

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...