alex Certify ಜಗತ್ತಿನ ಅತ್ಯಂತ ಹಳೆಯ ಯಾಂತ್ರಿಕೃತ ಮುದ್ರಿತ ಪುಸ್ತಕಗಳ ಪ್ರದರ್ಶನ ಆಯೋಜಿಸಿದ ಪ್ಯಾರಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ಹಳೆಯ ಯಾಂತ್ರಿಕೃತ ಮುದ್ರಿತ ಪುಸ್ತಕಗಳ ಪ್ರದರ್ಶನ ಆಯೋಜಿಸಿದ ಪ್ಯಾರಿಸ್

ಯೂರೋಪ್‌ನಲ್ಲಿ ಮೊದಲ ಬಾರಿಗೆ ಯಾಂತ್ರಿಕವಾಗಿ ಮುದ್ರಣಗೊಂಡ ದಾಖಲೆಗಿಂತ 50 ವರ್ಷಗಳ ಮುಂಚೆಯೇ ಬಿಡುಗಡೆಯಾಗಿದ್ದ ಕೊರಿಯನ್ ಪುಸ್ತಕವೊಂದನ್ನು ಪ್ಯಾರಿಸ್‌ನಲ್ಲಿ ಪ್ರದರ್ಶಿಸಲಾಗಿದೆ. ’ಜಿಕ್ಜಿ’ ಹೆಸರಿನ ಈ ಪುಸ್ತಕ ಬೌದ್ಧ ಪ್ರವಚನಗಳನ್ನು ಒಳಗೊಂಡಿದ್ದು, 1377ರಲ್ಲಿ ಮುದ್ರಿತವಾಗಿದೆ.

ಜೊಹಾನ್ಸೆಸ್ ಗುಟೆನ್‌ಬರ್ಗ್ ಬೈಬಲ್‌ನ ಮುದ್ರಿತ ಅವತರಣಿಕೆ ತರುವ 78 ವರ್ಷಗಳ ಮುಂಚಿನ ಪುಸ್ತಕ ’ಜಿಕ್ಜಿ’ ಆಗಿದೆ. ಫ್ರಾನ್ಸ್‌ನ ರಾಷ್ಟ್ರೀಯ ಗ್ರಂಥಾಲಯದಲ್ಲಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಜಿಕ್ಜಿಯನ್ನು ವಿಕ್ಟರ್‌ ಕಾಲಿನ್ ಡೆ ಪ್ರಾನ್ಸಿ ಹೆಸರಿನ ವ್ಯಕ್ತಿಯೊಬ್ಬರು 1887ರಲ್ಲಿ ಮೊದಲ ಬಾರಿಗೆ ಫ್ರಾನ್ಸ್‌ಗೆ ತಂದಿದ್ದರು. ಇವರು ಆ ಕಾಲದಲ್ಲಿ ಕೊರಿಯಾಗೆ ಫ್ರಾನ್ಸ್ ರಾಯಭಾರಿಯಾಗಿ ತೆರಳಿದ್ದರು.

ಈ ಪುಸ್ತಕವು 1371-1378ರ ನಡುವಿನ ಕಾಲಘಟ್ಟದ್ದು ಎಂದು ತಿಳಿದುಬಂದಿದೆ.

ಪ್ರದರ್ಶನದ ವೇಳೆ, ಜಗತ್ತಿನ ಮೂಲೆ ಮೂಲೆಗಳಿಂದ ಸಂಗ್ರಹಿಸಲಾದ ಮಧ್ಯಪ್ರಾಚ್ಯ ಕಾಲಘಟ್ಟದ ಅನೇಕ ಮುದ್ರಣಗಳನ್ನು ಇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...