alex Certify ನಿದ್ದೆಗಣ್ಣಲ್ಲಿ ಮಾತನಾಡುವ ವೇಳೆ ಬಯಲಾಯ್ತು ಬಾಯ್ ​ಫ್ರೆಂಡ್​ ಕಳ್ಳಾಟ..! ಮುಂದೇನಾಯ್ತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ದೆಗಣ್ಣಲ್ಲಿ ಮಾತನಾಡುವ ವೇಳೆ ಬಯಲಾಯ್ತು ಬಾಯ್ ​ಫ್ರೆಂಡ್​ ಕಳ್ಳಾಟ..! ಮುಂದೇನಾಯ್ತು ಗೊತ್ತಾ…?

ತನ್ನ ಬಾಯ್​ಫ್ರೆಂಡ್​ ನಿದ್ರೆಗಣ್ಣಲ್ಲಿ ಕನವರಿಸುತ್ತಿದ್ದುದನ್ನು ಕೇಳಿದ ಗರ್ಲ್​ಫ್ರೆಂಡ್​ ತಾನೆಂತ ದೊಡ್ಡ ಮೋಸಕ್ಕೆ ಒಳಗಾಗಿದ್ದೇನೆ ಎಂಬ ವಿಚಾರ ತಿಳಿದಿದ್ದಾಳೆ. ಬೈಲಿ ಹಂಟರ್​ ಹೇಳುವ ಪ್ರಕಾರ ಆಕೆಯ ಬಾಯ್​ಫ್ರೆಂಡ್​ ನಿದ್ದೆಗಣ್ಣಲ್ಲಿ ಇನ್ನೊಬ್ಬ ಮಹಿಳೆಯ ಹೆಸರನ್ನು ಹೇಳಿದ್ದ. ಇದಾದ ಬಳಿಕ ರಹಸ್ಯ ಕಾರ್ಯಾಚರಣೆ ನಡೆಸಿದ ಬೈಲಿಗೆ ದೊಡ್ಡ ಆಘಾತ ಎದುರಾಗಿದೆ.

ಈತ ನಿದ್ದೆಗಣ್ಣಲ್ಲಿ ಮಹಿಳೆಯ ಹೆಸರನ್ನು ಕನವರಿಸುತ್ತಿದ್ದಂತೆ ನಾನು ಫೇಸ್​ಬುಕ್​ನಲ್ಲಿ ಆಕೆಗಾಗಿ ಹುಡುಕಾಟ ನಡೆಸಿದೆ. ಆಗ ನನಗೆ ಆಕೆಗೆ ಮದುವೆಯಾಗಿದೆ ಹಾಗೂ ಮಕ್ಕಳು ಕೂಡ ಇದ್ದಾರೆ ಎಂಬ ವಿಚಾರ ತಿಳಿಯಿತು. ಮಾರನೇ ದಿನ ನಾನು ಆತನ ಬಳಿ ನಿದ್ದೆಗಣ್ಣಿನಲ್ಲಿ ಕನವರಿಸಿದ ಮಹಿಳೆಯ ಬಗ್ಗೆ ವಿಚಾರಿಸಿದೆ. ಆದರೆ ಆತ ಆಕೆ ತನ್ನ ಪ್ರೌಢಶಾಲೆಯ ಸಹಪಾಠಿ ಎಂದು ಹೇಳಿ ಜಾರಿಕೊಂಡಿದ್ದ ಎಂದು ಹಂಟರ್​ ವಿಡಿಯೋದಲ್ಲಿ ಹೇಳಿದ್ದಾರೆ.

ಆದರೆ ಹಂಟರ್​ಗೆ ಈ ಉತ್ತರವು ಸಮಾಧಾನಕರ ಎಂದೆನಿಸಲಿಲ್ಲ. ಹೀಗಾಗಿ ಆ ಮಹಿಳೆಯನ್ನೇ ಸಂಪರ್ಕಿಸಲು ಮುಂದಾದರು. ನಾನು ಆಕೆಯನ್ನು ಸಂಪರ್ಕ ಮಾಡಿದ ಬಳಿಕ ದೊಡ್ಡ ಆಘಾತಕ್ಕೆ ಒಳಗಾಗಿದ್ದೆ. ಆಕೆ ನನ್ನ ಬಳಿ ನಿನ್ನ ಕೆಲಸವೇನು ಅದಷ್ಟನ್ನೇ ನೋಡಿಕೋ. ನೀನು ಆತನ ಮಾಜಿ ಪ್ರೇಯಸಿ ಎಂದು ಕೂಗಿದ್ದಳು. ಇದರಿಂದ ಕೋಪಗೊಂಡ ನಾನು ಆತ ನನ್ನ ಮಾಜಿ ಪ್ರಿಯತಮ ಅಲ್ಲ. ಆತ ನನ್ನದೇ ಪ್ರಿಯತಮ. ಅಲ್ಲದೇ ಅವನು ನನ್ನ ಮನೆಯಲ್ಲೇ ಇರುತ್ತಾನೆ. ಆತನ ಮೊಬೈಲ್​ ಫೋನ್​ ಬಿಲ್​ನ್ನು ನಾನು ಭರಿಸುತ್ತಿದ್ದೇನೆ. ಅಷ್ಟೇ ಏಕೆ..? ಆತ ಓಡಿಸುವ ಕಾರ್​ ಕೂಡ ನನ್ನದು ಎಂದು ಪ್ರತ್ಯುತ್ತರ ನೀಡಿದೆ ಎಂದು ಹಂಟರ್​ ಹೇಳಿದ್ದಾರೆ.

ಇದಾದ ಕೆಲ ದಿನಗಳ ಬಳಿಕ ಮತ್ತೊಬ್ಬ ಮಹಿಳೆ ನಿನ್ನ ಬಾಯ್​ಫ್ರೆಂಡ್​ ನನ್ನ ಜೊತೆ ಸಂಪರ್ಕದಲ್ಲಿದ್ದಾನೆ ಎಂದು ಹಂಟರ್​ ಬಳಿ ಹೇಳಿದ್ದಳು. ಇದೆಲ್ಲದರಿಂದ ಅನುಮಾನಗೊಂಡ ಹಂಟರ್​​​ ಆತನ ಮೊಬೈಲ್​ ಫೋನ್​ ಚೆಕ್​ ಮಾಡಿದ್ದಳು. ಅಲ್ಲಿ ಯಾರದ್ದೋ ಜೊತೆ ಆತ 45 ನಿಮಿಷಗಳ ಕಾಲ ಮಾತನಾಡಿದ್ದ ಎಂಬ ದಾಖಲೆ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಆದರೆ ಆತ ಮಾತ್ರ ಅದು ಟೆಲಿಕಾಂ ಕಂಪನಿಯದ್ದೇ ದೋಷ ಎಂದು ಸಬೂಬು ನೀಡಿದ್ದ.

ಆದರೆ ಬಾಯ್​ಫ್ರೆಂಡ್​ ನಡವಳಿಕೆಗಳಿಂದ ಅನುಮಾನಗೊಂಡಿದ್ದ ಹಂಟರ್​​​ ಆತನನ್ನು ಮನೆ ಬಿಟ್ಟು ಹೋಗುವಂತೆ ಹೇಳಿದ್ದಾಳೆ. ಆತ ಮೊಬೈಲ್​ ಜೊತೆ ಮನೆಯಿಂದ ಹೊರ ನಡೆದಿದ್ದ. ಕೆಲ ದಿನಗಳ ಬಳಿಕ ಮೊಬೈಲ್​ ಫೋನ್​ ವಾಪಸ್​ ಕೊಡುತ್ತೇನೆ ಎಂದಿದ್ದ ಆತ ಬಳಿಕ ಬೇರೆಯದ್ದೇ ರಾಗ ಹಾಡಿದ್ದ, ಹೀಗಾಗಿ ಹಂಟರ್​ ಮೊಬೈಲ್​ ಫೋನ್​ ಕಳ್ಳತನದ ದೂರನ್ನು ದಾಖಲಿಸುವ ಬಗ್ಗೆ ಯೋಚಿಸಿದ್ದರು. ಆತ ಹಂಟರ್​ ಮೊಬೈಲ್ ಸಂಖ್ಯೆಯನ್ನು ಬ್ಲಾಕ್​ ಮಾಡಿದ್ದ. ಆದರೆ ಹಂಟರ್​ ಆತನ ಕಾರು ಸೇರಿದಂತೆ ಆ ವ್ಯಕ್ತಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಿದ್ದರು.

ಇದೀಗ ಈ ಎಲ್ಲಾ ಕತೆಗಳನ್ನು ಹಂಟರ್​ ಟಿಕ್​ಟಾಕ್​ನಲ್ಲಿ ಹೇಳಿಕೊಂಡಿದ್ದಾರೆ. ಪರಿಣಾಮ ಮೊಬೈಲ್​ ಕಾಲ್ ​ನಲ್ಲಿ ಬ್ಲಾಕ್​ ಮಾಡಿದ್ದ ಆ ಪುಣ್ಯಾತ್ಮ ಇದೀಗ ತನ್ನ ಬಗ್ಗೆ ಸಬೂಬು ಹೇಳಲು ಟಿಕ್​ಟಾಕ್​ನಲ್ಲಿ ಕಮೆಂಟ್​ ಮಾಡಿದ್ದಾನಂತೆ..!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...