alex Certify ಒಂದು ಕಾಲದಲ್ಲಿ ಮನೆಬಿಟ್ಟು ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ; ಇಂದು ಗಾಯನವೊಂದಕ್ಕೆ ಲಕ್ಷ ಲಕ್ಷ ಪಡೆಯುವ ಸಿಂಗರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕಾಲದಲ್ಲಿ ಮನೆಬಿಟ್ಟು ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ; ಇಂದು ಗಾಯನವೊಂದಕ್ಕೆ ಲಕ್ಷ ಲಕ್ಷ ಪಡೆಯುವ ಸಿಂಗರ್…!

Kailash Kher Revealed That He Attempted Suicide By Jumping Into Ganga, Due To Professional Failures

ಚಿತ್ರರಂಗದಲ್ಲಿ ಯಶಸ್ಸಿನ ಹಾದಿ ಸರಳವಲ್ಲ ಎಂಬುದನ್ನು ಹಲವರು ಹೇಳಿದ್ದಾರೆ. ಅನೇಕರು ಪ್ರತಿ ವರ್ಷ ಮುಂಬೈಗೆ ಸ್ಟಾರ್‌ಗಳಾಗಲು ಬಂದರೂ ಸ್ಟಾರ್ ಗಿರಿ ಸಿಗುವುದು ಕೆಲವರಿಗೆ ಮಾತ್ರ. ಅಂತಹ ಯಶಸ್ವಿ ತಾರೆಯರ ಕಥೆಗಳಲ್ಲಿ ಗಾಯಕ ಕೈಲಾಶ್ ಖೇರ್ ಕೂಡ ಕಥಾ ನಾಯಕರಾಗಿದ್ದಾರೆ.

ಮನೆಬಿಟ್ಟು ಓಡಿಹೋಗಿ ಒಂದು ಹಂತದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಅವರು ಇಂದು ಖ್ಯಾತ ಗಾಯಕರಾಗಿ ನಿಂತಿದ್ದಾರೆ. ಕೈಲಾಶ್ ಖೇರ್ ದೆಹಲಿಯಲ್ಲಿ 1973 ರಲ್ಲಿ ಕಾಶ್ಮೀರಿ ಕುಟುಂಬದಲ್ಲಿ ಜನಿಸಿದರು.

ಬಾಲ್ಯದಿಂದಲೂ ಉತ್ತಮ ಗಾಯನ ಕಂಠ ಹೊಂದಿದ್ದ ಅವರು ಗಾಯಕನಾಗಲು ಬಯಸಿದ್ದರು. ಆದರೆ ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ 14 ನೇ ವಯಸ್ಸಿನಲ್ಲಿ ಅವರು ಮನೆ ತೊರೆದರು. ತಮಗೆ ತರಬೇತಿ ನೀಡುವ ಗುರು ಅಥವಾ ಶಿಕ್ಷಕರನ್ನು ಹುಡುಕುವ ಪ್ರಯತ್ನದಲ್ಲಿದ್ದ ಅವರು ಬಳಿಕ ಶಾಸ್ತ್ರೀಯ ಮತ್ತು ಜಾನಪದ ಸಂಗೀತದಲ್ಲಿ ಹಲವು ವರ್ಷಗಳ ಅಧ್ಯಯನ ನಡೆಸಿದರು.

ಈ ವೇಳೆ ಅವರು ಋಷಿಕೇಶ ಮತ್ತು ಹರಿದ್ವಾರದಲ್ಲಿ ಹಲವು ವರ್ಷಗಳನ್ನು ಕಳೆದರು. ಸಾಧುಗಳು ಮತ್ತು ಸನ್ಯಾಸಿಗಳೊಂದಿಗೆ ವಾಸಿಸುತ್ತಿದ್ದರು ಮತ್ತು ಆಗಾಗ್ಗೆ ಘಾಟ್‌ಗಳ ಬಳಿಯ ರಸ್ತೆಗಳಲ್ಲಿ ಮಲಗುತ್ತಿದ್ದರು. ಅವರಿಗೆ ಸಂಗೀತ ಗುರು ಸಿಗದಿದ್ದರೂ , ಸಂಗೀತಾಭ್ಯಾಸ ಮತ್ತು ಕಲಿಕೆಯನ್ನು ಮಾತ್ರ ನಿಲ್ಲಿಸಲಿಲ್ಲ.

1999 ರಲ್ಲಿ ಕೈಲಾಶ್ ಖೇರ್ ತಮ್ಮ ಕುಟುಂಬದ ಮಾತನ್ನು ಕೇಳಲು ನಿರ್ಧರಿಸಿ ಹಣ ಗಳಿಸಲು ರಫ್ತು ವ್ಯವಹಾರವನ್ನು ಪ್ರಾರಂಭಿಸಿದರು. ಆದರೆ ವ್ಯಾಪಾರ ಕುಸಿದಿದ್ದರಿಂದ ಖಿನ್ನತೆಗೆ ಒಳಗಾದೆ. ಈ ಹಂತದಲ್ಲಿ ಜೀವನವನ್ನು ಕೊನೆಗಾಣಿಸಿಕೊಳ್ಳಬೇಕೆಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇಂದಿನ ನನ್ನ ಸ್ಥಿತಿಗೆ ಮುಂಬೈನಲ್ಲಿರುವ ನನ್ನ ಸ್ನೇಹಿತ ಮತ್ತು ದೇವರು ಕಾರಣ. ಅವರು ನಾನು ಅಂದುಕೊಂಡಿದ್ದನ್ನು ಸಾಧಿಸಲು ನೆರವಾದವರು ಎಂದು ಸ್ಮರಿಸಿದ್ದರು.

2003 ರಲ್ಲಿ ಕೈಲಾಶ್ ಖೇರ್ ಅಲ್ಲಾ ಕೆ ಬಂದೆ ಹಾಡಿನ ಮೂಲಕ ದೊಡ್ಡ ಹೆಸರು ಪಡೆದುಕೊಂಡರು. ಹೆಚ್ಚಿನ ಚಲನಚಿತ್ರ ಹಾಡುಗಳಿಗೆ ಮತ್ತು ಯಶಸ್ವಿ ಖಾಸಗಿ ಆಲ್ಬಮ್‌ನಲ್ಲಿ ಹಾಡಿ ಖ್ಯಾತರಾದರು.

ಸಿನಿಮಾ ರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ, ಕೈಲಾಶ್ ಖೇರ್ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಟಾಪ್ 1 ಗಾಯಕರಾದರು. ವರದಿಗಳ ಪ್ರಕಾರ ಒಂದು ಕಾಲದಲ್ಲಿ 150 ರೂಪಾಯಿ ಸಂಬಳ ಪಡೆಯುತ್ತಿದ್ದ ಕೈಲಾಶ್ ಖೇರ್ ಪ್ರತಿ ಹಾಡಿಗೆ 10 ಲಕ್ಷ ರೂಪಾಯಿ ಶುಲ್ಕ ಪಡೆಯುವವರೆಗೆ ಬೆಳೆದು ನಿಂತರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...