alex Certify ಮಿಷಿಗನ್ ಸರೋವರದ ತೀರದಲ್ಲಿ ಸುಂದರ ಕಲಾಕೃತಿಗಳ ರಚಿಸಿದ ಗಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಷಿಗನ್ ಸರೋವರದ ತೀರದಲ್ಲಿ ಸುಂದರ ಕಲಾಕೃತಿಗಳ ರಚಿಸಿದ ಗಾಳಿ

ಪ್ರಕೃತಿ ಸೃಷ್ಟಿಸುವ ಕಲಾಕೃತಿಗಳ ಸೌಂದರ್ಯಕ್ಕೆ ಸಾಟಿಯಾದದು ಬೇರೊಂದಿಲ್ಲ. ಇವುಗಳಲ್ಲಿ ಬಹುತೇಕ ಪ್ರಕ್ರಿಯೆಗಳಿಗೆ ಮಾನವರಲ್ಲಿ ವಿವರಣೆಯೇ ಇರುವುದಿಲ್ಲ.

ಇಂಥ ಉದಾಹರಣೆಗಳಲ್ಲಿ ಒಂದರ ಚಿತ್ರವೊಂದು ರೆಡ್ಡಿಟ್‌ನಲ್ಲಿ ಟ್ರೆಂಡ್ ಆಗಿದೆ. ಅಮೆರಿಕದ ಮಿಷಿಗನ್ ಸರೋವರದಲ್ಲಿ ಜೋರಾದ ಗಾಳಿ ಸೃಷ್ಟಿಸಿರುವ ಈ ರಚನೆಗಳನ್ನು ಪರಸರ ಛಾಯಾಗ್ರಾಹಕ ಜೋಶುವಾ ನೋವಿಕಿ ಸೆರೆಹಿಡಿದಿದ್ದಾರೆ.

ರುದ್ರ ರಮಣೀಯವಾಗಿದೆ ಮಿಷಿಗನ್‌ ಸರೋವರದ ದೃಶ್ಯ

ಈ ಸುಂದರ ರಚನೆಗಳ ಚಿತ್ರಗಳನ್ನು ರೆಡ್ಡಿಟ್‌ನಲ್ಲಿ ಶೇರ್‌ ಮಾಡಲಾಗಿದ್ದು, ಅದಕ್ಕೆ 10,000+ ಅಪ್‌ವೋಟ್‌ಗಳು ಸಿಕ್ಕಿವೆ.

ಸೇಂಟ್ ಜೋಸೆಫ್ ಹೆಸರಿನ ಪಟ್ಟಣದ ಬಳಿಯ ತೀರದಲ್ಲಿ ಈ ಸುಂದರ ಕಲಾಕೃತಿಗಳು ಸೆರೆಸಿಕ್ಕಿವೆ. ಬಹಳ ಮಂದಿ ನೆಟ್ಟಿಗರಿಗೆ ಈ ಚಿತ್ರಗಳು ಮೆಚ್ಚುಗೆಯಾದರೆ ಕೆಲವೊಂದು ಮಂದಿ ಇದು ಫೋಟೋಶಾಪ್ ಆಗಿದೆ ಎಂದಿದ್ದಾರೆ. ಆದರೆ ಈ ಚಿತ್ರಗಳನ್ನು ಪೋಸ್ಟ್ ಮಾಡಿದ ಟೆರ‍್ರಿ ಅಬಾಟ್ ಈ ಆಪಾದನೆಗಳನ್ನು ಅಲ್ಲಗಳೆದಿದ್ದಾರೆ.

ಈ ಕಲಾಕೃತಿಗಳು ಚೆಸ್ ಆಟದ ಕಾಯಿಗಳಂತೆಯೇ ಇವೆ ಎಂದು ಬಹಳಷ್ಟು ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...