ಪ್ರಕೃತಿ ಸೃಷ್ಟಿಸುವ ಕಲಾಕೃತಿಗಳ ಸೌಂದರ್ಯಕ್ಕೆ ಸಾಟಿಯಾದದು ಬೇರೊಂದಿಲ್ಲ. ಇವುಗಳಲ್ಲಿ ಬಹುತೇಕ ಪ್ರಕ್ರಿಯೆಗಳಿಗೆ ಮಾನವರಲ್ಲಿ ವಿವರಣೆಯೇ ಇರುವುದಿಲ್ಲ.
ಇಂಥ ಉದಾಹರಣೆಗಳಲ್ಲಿ ಒಂದರ ಚಿತ್ರವೊಂದು ರೆಡ್ಡಿಟ್‌ನಲ್ಲಿ ಟ್ರೆಂಡ್ ಆಗಿದೆ. ಅಮೆರಿಕದ ಮಿಷಿಗನ್ ಸರೋವರದಲ್ಲಿ ಜೋರಾದ ಗಾಳಿ ಸೃಷ್ಟಿಸಿರುವ ಈ ರಚನೆಗಳನ್ನು ಪರಸರ ಛಾಯಾಗ್ರಾಹಕ ಜೋಶುವಾ ನೋವಿಕಿ ಸೆರೆಹಿಡಿದಿದ್ದಾರೆ.
ರುದ್ರ ರಮಣೀಯವಾಗಿದೆ ಮಿಷಿಗನ್ ಸರೋವರದ ದೃಶ್ಯ
ಈ ಸುಂದರ ರಚನೆಗಳ ಚಿತ್ರಗಳನ್ನು ರೆಡ್ಡಿಟ್‌ನಲ್ಲಿ ಶೇರ್ ಮಾಡಲಾಗಿದ್ದು, ಅದಕ್ಕೆ 10,000+ ಅಪ್‌ವೋಟ್‌ಗಳು ಸಿಕ್ಕಿವೆ.
ಸೇಂಟ್ ಜೋಸೆಫ್ ಹೆಸರಿನ ಪಟ್ಟಣದ ಬಳಿಯ ತೀರದಲ್ಲಿ ಈ ಸುಂದರ ಕಲಾಕೃತಿಗಳು ಸೆರೆಸಿಕ್ಕಿವೆ. ಬಹಳ ಮಂದಿ ನೆಟ್ಟಿಗರಿಗೆ ಈ ಚಿತ್ರಗಳು ಮೆಚ್ಚುಗೆಯಾದರೆ ಕೆಲವೊಂದು ಮಂದಿ ಇದು ಫೋಟೋಶಾಪ್ ಆಗಿದೆ ಎಂದಿದ್ದಾರೆ. ಆದರೆ ಈ ಚಿತ್ರಗಳನ್ನು ಪೋಸ್ಟ್ ಮಾಡಿದ ಟೆರ‍್ರಿ ಅಬಾಟ್ ಈ ಆಪಾದನೆಗಳನ್ನು ಅಲ್ಲಗಳೆದಿದ್ದಾರೆ.
ಈ ಕಲಾಕೃತಿಗಳು ಚೆಸ್ ಆಟದ ಕಾಯಿಗಳಂತೆಯೇ ಇವೆ ಎಂದು ಬಹಳಷ್ಟು ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ವಿವರಿಸಿದ್ದಾರೆ.