alex Certify ದಕ್ಷಿಣ ಕೊರಿಯಾ ಮಹಿಳೆಯರು ಕೂದಲು ಕತ್ತರಿಸಿಕೊಂಡು ಫೋಟೋ ಹಾಕುತ್ತಿರುವುದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಕೊರಿಯಾ ಮಹಿಳೆಯರು ಕೂದಲು ಕತ್ತರಿಸಿಕೊಂಡು ಫೋಟೋ ಹಾಕುತ್ತಿರುವುದರ ಹಿಂದಿದೆ ಈ ಕಾರಣ

ಟೋಕಿಯೋ ಒಲಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದ ದಕ್ಷಿಣ ಕೊರಿಯಾದ ಆರ್ಚರ್‌ ಆನ್ ಸಾನ್ ತಮ್ಮ ತವರಿಗೆ ಮರಳುತ್ತಲೇ ಭಾರೀ ಕರತಾಡನದೊಂದಿಗೆ ಸ್ವಾಗತಿಸಲಾಗಿದೆ.

ಇದೇ ವೇಳೆ ತಮ್ಮ ತುಂಡು ಕೂದಲಿನ ವಿಚಾರವಾಗಿ 20 ವರ್ಷದ ಚಾಂಪಿಯನ್ ತಮ್ಮದೇ ಜನರಿಂದ ’ಮಹಿಳಾ ಪರವಾದಿ’ ಎನಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ’ಫೆಮಿನಿಸ್ಟ್’ ಎಂದರೆ ಪುರುಷ-ದ್ವೇಷಿ ಎಂಬ ಅರ್ಥವಿದೆ ಎಂದು ಬಿಬಿಸಿ ವರದಿ ಮಾಡಿದೆ.

“ನಮ್ಮ ತೆರಿಗೆ ದುಡ್ಡಿನಲ್ಲಿ ನಿಮ್ಮನ್ನು ಪೋಷಿಸಿದ್ದು ಫೆಮಿನಿಸ್ಟ್‌ ಕೆಲಸ ಮಾಡೋದಕ್ಕೆ ಅಲ್ಲ” ಎಂದು ನೆಟ್ಟಿಗರೊಬ್ಬರು ಆನ್ ಸಾನ್‌ರ ಇನ್‌ಸ್ಟಾಗ್ರಾಂ ಪೋಸ್ಟ್ ಒಂದಕ್ಕೆ ಕಾಮೆಂಟ್ ಮಾಡಿದ್ದಾರೆ.

ಈ ಕಾರಣಕ್ಕೆ ವಿಮಾನದಲ್ಲಿಯೇ ನಡೆದಿದೆ ಪ್ರತಿಭಟನೆ

ಜಗತ್ತಿನ ಬಹುತೇಕ ಕಡೆಗಳಲ್ಲಿಯಂತೆಯೇ ದಕ್ಷಿಣ ಕೊರಿಯಾದಲ್ಲೂ ಉದ್ದನೆಯ ಕೂದಲು ಮಹಿಳೆಯರಿಗೆ ಶೋಭೆ ಎಂದು ನಂಬಲಾಗಿದೆ. ತುಂಡು ಕೂಡಲು ಹೊಂದಲು ಮುಂದಾದ ಆನ್ ಸಾನ್‌ರ ನಿರ್ಣಯವು ’ಸಾಮಾಜಿಕ ಕಟ್ಟುಪಾಡುಗಳ’ ಉಲ್ಲಂಘನೆಯಾಗಿದೆ ಎಂದು ಕೆಲವೇ ಕೆಲವು ಮಂದಿ ಹೇಳಿದ್ದನ್ನೇ ಆ ದೇಶದ ಇಡೀ ಪುರುಷ ಸಮೂಹ ಆಕೆಯ ವಿರುದ್ಧ ನಿಂತಿದೆ ಎಂಬಂತೆ ಮಾಧ್ಯಮಗಳಲ್ಲಿ ಬಿತ್ತರವಾಗಿದೆ.

ಇದೀಗ ಆನ್ ಸಾನ್‌ರ ತುಂಡು ಕೂದಲಿಗೆ ಬೆಂಬಲ ನೀಡುವ ಅಭಿಯಾನವೇ ಆರಂಭಗೊಂಡಿದ್ದು, ಬಹಳಷ್ಟು ಮಹಿಳೆಯರು ಖುದ್ದು ತಮ್ಮ ಕೂದಲನ್ನು ತುಂಡಾಗಿ ಕತ್ತರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...