alex Certify ಕಳ್ಳರ ಕಾಟದಿಂದ ಚಿಂತೆಗೊಳಗಾಗಿದ್ದಾರೆ ಫ್ರೆಂಚ್ ಬುಲ್‌ ಡಾಗ್‌ ಮಾಲೀಕರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳರ ಕಾಟದಿಂದ ಚಿಂತೆಗೊಳಗಾಗಿದ್ದಾರೆ ಫ್ರೆಂಚ್ ಬುಲ್‌ ಡಾಗ್‌ ಮಾಲೀಕರು…!

ಕ್ಯಾಲಿಫೋರ್ನಿಯಾದ ಬೀದಿಯಲ್ಲಿ 27 ವರ್ಷದ ಮರೀಕೆ ಬೇಯೆನ್ಸ್‌ ಬಳಿ ದರೋಡೆ ಮಾಡಿದ ಇಬ್ಬರು ಕಳ್ಳರಿಗೆ ಬೇಕಿದ್ದಿದ್ದು ಆಕೆಯ ಪರ್ಸ್ ಅಲ್ಲ ಅವರಿಗೆ ಬೇಕಿದ್ದಿದ್ದು ಆಕೆಯ ಬಳಿ ಇದ್ದ ಪುಟ್ಟ ನಾಯಿ — ಮೆರ್ಲಿನ್, ಫ್ರೆಂಚ್ ಬುಲ್‌ಡಾಗ್‌.

ನ್ಯೂಯಾರ್ಕ್‌ನಿಂದ ಲಾಸ್ ಏಂಜಲೀಸ್‌ವರೆಗೆ ಮತ್ತು ಮಿಯಾಮಿಯಿಂದ ಚಿಕಾಗೋವರೆಗೆ ಅತ್ಯಂತ ಬೆಲೆಬಾಳುವ ಈ ತಳಿಯ ಶ್ವಾನಗಳ ಕಳ್ಳತನಗಳು ಹೆಚ್ಚುತ್ತಿವೆ.

Online ನಲ್ಲಿ ಮೂತ್ರ ಮಾರಿ ಲಕ್ಷಾಂತರ ರೂಪಾಯಿ ದುಡ್ಡು ಮಾಡುತ್ತಿರುವ ಮಾಡೆಲ್

ಪುಟ್ಟದಾದ ಮತ್ತು ಸ್ನೇಹಶೀಲವಾಗಿರುವ ಫ್ರೆಂಚ್ ಬುಲ್ಡಾಗ್‌ಗಳು ಭಾರೀ ಜನಪ್ರಿಯವಾಗಿವೆ. ಈ ಶ್ವಾನಗಳು ಕಾಳ ಸಂತೆಯಲ್ಲಿ ಸಾವಿರಾರು ಡಾಲರ್‌ಗಳಿಗೆ ಮಾರಾಟವಾಗುತ್ತವೆ.

ಇವುಗಳ ಪೈಕಿ ಅತ್ಯಂತ ಜನಪ್ರಿಯಳಾದ ಸಂತ್ರಸ್ತೆ ಲೇಡಿ ಗಾಗಾ. ಕಳೆದ ವರ್ಷ ಈಕೆಯ ಸಾಕು ನಾಯಿಗಳಾದ ಕೋಜಿ ಮತ್ತು ಗುಸ್ತಾವ್‌ರನ್ನು ಶಸ್ತ್ರಸಜ್ಜಿತ ಕಳ್ಳರು ಕದ್ದಿದ್ದರು.

ತಮ್ಮ ನಾಯಿಗಳನ್ನು ಮರಳಿ ತಂದವರಿಗೆ $500,000 ದ ಇನಾಮನ್ನು ಸಹ ಸೂಪರ್‌ಸ್ಟಾರ್‌ ಗಾಯಕಿ ಘೋಷಿಸಿದ್ದು, ನಾಯಿಗಳನ್ನು ಮರಳಿ ಪಡೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದರು.

ಇಂಥದ್ದೇ ಶೈಲಿಯಲ್ಲಿ ಬುಲ್‌ಡಾಗ್‌ಗಳನ್ನು ಕದಿಯಲು ಕಳ್ಳರು ಮುಂದಾಗುತ್ತಿರುವುದು ಅಮೆರಿಕದಲ್ಲಿ ಈ ಶ್ವಾನಗಳಿಗೆ ಅದ್ಯಾವ ಮಟ್ಟದ ಡಿಮ್ಯಾಂಡ್ ಇದೆ ಎಂದು ಸಾರಿ ಹೇಳುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...