alex Certify ರಾತ್ರಿ ಮಲಗುವ ಮುನ್ನ ಹಾಲು ಏಕೆ ಕುಡಿಯಬೇಕು….? ಇಲ್ಲಿದೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗುವ ಮುನ್ನ ಹಾಲು ಏಕೆ ಕುಡಿಯಬೇಕು….? ಇಲ್ಲಿದೆ ಉತ್ತರ

ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಕುಡಿಯಲು ಹಾಲು ಕೊಡುತ್ತೇವೆ. ಆದರೆ ಹಿರಿಯರೂ ಹಾಲು ಕುಡಿಯುವುದರಿಂದ ಅದೆಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ ?

ಹಾಲಿನಲ್ಲಿರುವ ಟ್ರಿಕ್ಟೋಪ್ಯಾನ್ ಎಂಬ ಅಂಶ ರಾತ್ರಿ ವೇಳೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಈ ರಸದೂತದ ನೆರವಿನಿಂದ ರಾತ್ರಿ ಸೊಂಪಾದ ನಿದ್ದೆಯನ್ನೂ ಪಡೆಯಬಹುದು.

ಹಾಲಿನಲ್ಲಿರುವ ಕಾರ್ಬೋಹೈಡ್ರೇಟ್ ಮತ್ತು ಆರೋಗ್ಯಕರ ಕೊಬ್ಬು ದೇಹದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ ಮಾತ್ರವಲ್ಲ ಉತ್ತಮ ನಿದ್ರೆಯನ್ನೂ ತಂದುಕೊಡುತ್ತದೆ.

ಊಟಕ್ಕೆ ಒಂದು ಗಂಟೆ ಮೊದಲು ಹಾಲು ಕುಡಿಯುವುದರಿಂದಲೂ ಹಲವು ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಇದರಲ್ಲಿ ಕ್ಯಾಲ್ಸಿಯಂ ಮೂಳೆಗಳ ಬಲಪಡಿಸುವಿಕೆಗೆ ಬಹುಮುಖ್ಯ.

ಅದರಲ್ಲೂ ಮಕ್ಕಳಿಗೆ ನಿತ್ಯ ಮಲಗುವ ಮುನ್ನ ಹಾಲು ಕುಡಿಯಲು ಕೊಡುವುದರಿಂದ ಮಕ್ಕಳ ಹಲ್ಲು ಬಲಿಷ್ಠವಾಗುತ್ತದೆ. ಅವರ ದೇಹ ನಿರೋಧಕ ಶಕ್ತಿಯೂ ಬೆಳೆದು ಮಕ್ಕಳು ಗಟ್ಟಿಮುಟ್ಟಾಗುತ್ತಾರೆ. ಕಫ ಕಟ್ಟುವ ಮಕ್ಕಳಿಗಾದರೆ ತುಸುವೇ ಬಿಸಿ ಹಾಲಿಗೆ ಚಿಟಿಕೆ ಅರಶಿನ ಪುಡಿ ಉದುರಿಸಿ ಹಾಲು ಕುಡಿಯಲು ಕೊಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...