alex Certify ʼಫಿಂಗರ್ ಪ್ರಿಂಟ್ʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಫಿಂಗರ್ ಪ್ರಿಂಟ್ʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಸ್ಮಾರ್ಟ್ಫೊನ್ ಗಳಿಂದ ಹಿಡಿದು ಆಫೀಸ್ ನ ಹಾಜರಾತಿವರೆಗೆ ಎಲ್ಲದಕ್ಕೂ ಇತ್ತೀಚಿನ ದಿನಗಳಲ್ಲಿ ಫಿಂಗರ್‌ಪ್ರಿಂಟ್‌ ಬಳಸಲಾಗುತ್ತದೆ. ಫಿಂಗರ್ ಪ್ರಿಂಟ್ ಹೆಚ್ಚು ಪರಿಣಾಮಕಾರಿಯಾಗಿದೆ.

ಜಗತ್ತಿನಲ್ಲಿ ಕೋಟ್ಯಾಂತರ ಜನರಿದ್ದಾರೆ. ಆದ್ರೆ ಮನುಷ್ಯನ ಬೆರಳಚ್ಚು ಮಾತ್ರ ಪ್ರತಿಯೊಬ್ಬರದ್ದೂ ಭಿನ್ನವಾಗಿದೆ. ಯಾವುದೇ ಮನುಷ್ಯನ ಬೆರಳಚ್ಚು ಬೇರೆ ಯಾವುದೇ ಮನುಷ್ಯನಿಗೆ ಹೊಂದಿಕೆಯಾಗುವುದಿಲ್ಲ. ಒಬ್ಬ ವ್ಯಕ್ತಿಯ ಫಿಂಗರ್‌ಪ್ರಿಂಟ್  ಬದಲಾಗುವುದಿಲ್ಲ.

ಕೈ ಸುಟ್ಟರೆ ಅಥವಾ ಇನ್ನಾವುದೇ ಗಾಯವಾದ್ರೂ ಕೈ ಬೆರಳಿನ ಅಚ್ಚು ಬದಲಾಗುವುದಿಲ್ಲ. ಪ್ರತಿಯೊಬ್ಬ ಮನುಷ್ಯನ ಕೈಯ ಚರ್ಮವು ಎರಡು ಪದರಗಳಿಂದ ಮಾಡಲ್ಪಟ್ಟಿದೆ. ಮೊದಲ ಪದರವು ಎಪಿಡರ್ಮಿಸ್ ಮತ್ತು ಎರಡನೇ ಪದರವು ಒಳಚರ್ಮವಾಗಿದೆ. ಎರಡೂ ಪದರಗಳು ಒಟ್ಟಿಗೆ ಬೆಳೆಯುತ್ತವೆ. ಈ ಎರಡು ಪದರಗಳನ್ನು ಮಿಶ್ರಣ ಮಾಡುವ ಮೂಲಕ, ನಮ್ಮ ಕೈಗಳ ಚರ್ಮದ ಮೇಲೆ ಬೆರಳಚ್ಚುಗಳು ರೂಪುಗೊಳ್ಳುತ್ತವೆ. ಫಿಂಗರ್‌ಪ್ರಿಂಟ್ ಉಬ್ಬುಗಳು ಎಷ್ಟು ಶಕ್ತಿಯುತವಾಗಿವೆ ಎಂದರೆ ಅವುಗಳನ್ನು ಪಾಸ್ವರ್ಡ್‌ಗಳಂತೆ ಬಳಸಲಾಗುತ್ತದೆ.

ತಜ್ಞರ ಪ್ರಕಾರ, ಮಗು ಗರ್ಭಾಶಯದಲ್ಲಿ ಬೆಳೆಯುತ್ತಿರುವಾಗಲೇ  ಬೆರಳಚ್ಚುಗಳು ಸಿದ್ಧವಾಗಲು ಪ್ರಾರಂಭಿಸುತ್ತವೆ. ಕೈನಲ್ಲಿ ಯಾವುದೇ ಸಮಸ್ಯೆಯಾದ್ರೂ ಕೆಲವೇ ದಿನಗಳಲ್ಲಿ ಬೆರಳಚ್ಚು ಮತ್ತೆ ರೂಪಗೊಳ್ಳುತ್ತದೆ. ಕೈ ಸುಟ್ಟರೆ ಒಂದು ತಿಂಗಳಲ್ಲಿ ಮತ್ತೆ ಬೆರಳಚ್ಚು ರೂಪಗೊಳ್ಳುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...