alex Certify ಕೌನ್ ಅಮೀರ್ ಖಾನ್….? ರಿಕ್ಷಾ ಚಾಲಕನ ಪ್ರಶ್ನೆಗೆ ಹೌಹಾರಿದ್ದ ಸ್ಟಾರ್ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೌನ್ ಅಮೀರ್ ಖಾನ್….? ರಿಕ್ಷಾ ಚಾಲಕನ ಪ್ರಶ್ನೆಗೆ ಹೌಹಾರಿದ್ದ ಸ್ಟಾರ್ ನಟ

ನಟ ಅಮೀರ್ ಖಾನ್ ಇಂದು ಸೂಪರ್‌ಸ್ಟಾರ್ ಆಗಿರಬಹುದು, ಆದರೆ ತಮ್ಮ ಚೊಚ್ಚಲ ಚಿತ್ರದ ಜಾಹೀರಾತು ಪೋಸ್ಟರ್ ಅಂಟಿಸಲು ಮುಂಬೈನ ಬೀದಿಗಳಲ್ಲಿ ಅಲೆದಾಟ ಮಾಡಿದ್ದಿದೆ. ಈ ಹಳೆಯ ನೆನಪು ಕೆದಕುವ ಸುದ್ದಿ ವೈರಲ್ ಆಗಿದೆ.

ಜೂಹಿ ಚಾವ್ಲಾ ಜತೆಯಾಗಿ ನಟಿಸಿದ ʼಕಯಾಮತ್ ಸೆ ಕಯಾಮತ್ ತಕ್ʼ ಎಂಬ ಟ್ರಾಜಿಡಿ ಲವ್ ಸ್ಟೋರಿ ಚಿತ್ರದೊಂದಿಗೆ ಅಮೀರ್ ಚಿತ್ರರಂಗಕ್ಕೆ ಕಾಲಿಟ್ಟರು. ಹಳೆಯ ಸಂದರ್ಶನವೊಂದರಲ್ಲಿ, ಅಮೀರ್ ಅವರು ಆ ಚಿತ್ರದ ಬಗ್ಗೆ ಎಷ್ಟು ನರ್ವಸ್ ಆಗಿದ್ದರು ಎಂದು ನೆನಪಿಸಿಕೊಂಡಿದ್ದರು.

ರೋಗಿಯನ್ನು ಮನೆಗೆ ತಲುಪಿಸಲು 100 ಕಿ.ಮೀ. ಕ್ರಮಿಸಿದ ಆಟೋ ಚಾಲಕಿ…!

ನಾನು ಯಾರನ್ನಾದರೂ ಭೇಟಿಯಾದಾಗ ದಯವಿಟ್ಟು ಚಿತ್ರ ನೋಡಿ ಎಂದು ಹೇಳುತ್ತಿದ್ದೆ. ನಾನು ನನ್ನ ಇತರ ಸಹ- ನಟ ನಟಿಯರೊಂದಿಗೆ ಆಟೋಗಳ ಮೇಲೆ ಚಿತ್ರದ ಪೋಸ್ಟರ್‌ ಅಂಟಿಸುತ್ತಿದ್ದೆವು ಎಂದು ಹಳೆಯ ಘಟನೆ ಮೆಲುಕು ಹಾಕಿದ್ದಾರೆ.

ಪೋಸ್ಟರ್ ಅಂಟಿಸಲು ಆಟೋ, ಟ್ಯಾಕ್ಸಿ ನಿಲ್ಲಿಸುವಂತೆ ಕೇಳುತ್ತಿದ್ದೆವು ಕೆಲವರು ಸಾಧ್ಯವಿಲ್ಲ ಎನ್ನುತ್ತಿದ್ದರು, ಇನ್ನು ಕೆಲವರು ಚಿತ್ರದಲ್ಲಿ ಯಾರಿದ್ದಾರೆ ಎಂದು ಪ್ರಶ್ನಿಸುತ್ತಿದ್ದರು ನಾನು ‘ಅಮೀರ್ ಖಾನ್’ ಎಂದು ಹೇಳುತ್ತಿದ್ದೆ. ಅವರು ‘ಕೌನ್ ಅಮೀರ್ ಖಾನ್ ?’ ಎಂದು ಪ್ರಶ್ನೆ ಮಾಡುತ್ತಿದ್ದರು‌ ಎಂದು ಹೇಳಿಕೊಂಡಿದ್ದಾರೆ.

ಮನ್ಸೂರ್ ಖಾನ್ ನಿರ್ದೇಶಿಸಿದ ʼಕಯಾಮತ್ ಸೆ ಕಯಾಮತ್ ತಕ್ʼ 1988 ರಲ್ಲಿ ಬಿಡುಗಡೆಯಾಗಿ ಯಶಸ್ಸು ಗಳಿಸಿತ್ತು. ಅಮೀರ್ ಮುಂದೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...