alex Certify ಅಮಲಿನಲ್ಲಿದ್ದ ಯುವತಿಯಿಂದ ರಸ್ತೆಯಲ್ಲೇ ರಂಪಾಟ: ಆಟೋ ಚಾಲಕನ ಮೇಲೆ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮಲಿನಲ್ಲಿದ್ದ ಯುವತಿಯಿಂದ ರಸ್ತೆಯಲ್ಲೇ ರಂಪಾಟ: ಆಟೋ ಚಾಲಕನ ಮೇಲೆ ಹಲ್ಲೆ

ಬೆಂಗಳೂರು: ಮದ್ಯಪಾನ ಮಾಡಿ ಕಾರ್ ಚಲಾಯಿಸಿದ ಯುವತಿ ನಡುರಸ್ತೆಯಲ್ಲಿಯೇ ರಂಪಾಟ ಮಾಡಿದ ಘಟನೆ ಬೆಂಗಳೂರಿನ ಸದಾಶಿವನಗರ ರಸ್ತೆಯಲ್ಲಿ ಕಳೆದ ರಾತ್ರಿ ನಡೆದಿದೆ.

ಅಡ್ಡಾದಿಡ್ಡಿಯಾಗಿ ಕಾರ್ ಚಾಲನೆ ಮಾಡಿಕೊಂಡು ಬಂದ ಯುವತಿ ಪ್ರಶ್ನಿಸಿದ ಆಟೋ ಚಾಲಕನ ಮೈ ಕೈ ಪರಚಿ ಗಾಯಗೊಳಿಸಿದ್ದಾಳೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದಾಶಿವನಗರ ರಸ್ತೆಯಲ್ಲಿ ಯುವತಿ ಮದ್ಯಪಾನ ಮಾಡಿ ಅಡ್ಡಾದಿಡ್ಡಿಯಾಗಿ ಕಾರ್ ಚಾಲನೆ ಮಾಡಿದ್ದು, ಆಟೋ ಚಾಲಕ ನಿಶಾಂತ್ ಈ ಬಗ್ಗೆ ಪ್ರಶ್ನಿಸಿದಾಗ ಯುವತಿ ಮತ್ತು ಆಕೆಯ ಜೊತೆಗಿದ್ದ ಯುವಕ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸಿದ್ದು ಮೈ ಕೈ ಪರಚಿ ಗಾಯಗೊಳಿಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...