alex Certify ಉದ್ದೇಶ ಚೆನ್ನಾಗಿತ್ತು, ತಪ್ಪಾಗಿ ಅರ್ಥೈಸಲಾಗಿದೆ: ಜಾಹೀರಾತಿಗೆ ಬಂದ ಟೀಕೆಗೆ ಜೊಮ್ಯಾಟೋ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ದೇಶ ಚೆನ್ನಾಗಿತ್ತು, ತಪ್ಪಾಗಿ ಅರ್ಥೈಸಲಾಗಿದೆ: ಜಾಹೀರಾತಿಗೆ ಬಂದ ಟೀಕೆಗೆ ಜೊಮ್ಯಾಟೋ ಸ್ಪಷ್ಟನೆ

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಕತ್ರೀನಾ ಕೈಫ್ ಅವರನ್ನೊಳಗೊಂಡ ಇತ್ತೀಚಿನ ಜೊಮ್ಯಾಟೋ ಜಾಹೀರಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೀಗ ಜನರ ಟೀಕೆಗೆ ಬಗ್ಗಿದ ಜೊಮ್ಯಾಟೋ ಸ್ಪಷ್ಟನೆ ನೀಡಿದೆ.

ಜಾಹೀರಾತುಗಳಿಗಾಗಿ ಬಾಲಿವುಡ್ ಸೆಲೆಬ್ರೆಟಿಗಳನ್ನು ನೇಮಿಸಿಕೊಳ್ಳುವ ಬದಲು ಅದರ ವಿತರಣಾ ಕಾರ್ಯನಿರ್ವಾಹಕರ ವಿತ್ತೀಯ ಪರಿಸ್ಥಿತಿಯನ್ನು ಸುಧಾರಿಸುವಂತೆ ಜೊಮ್ಯಾಟೋವನ್ನು ನೆಟ್ಟಿಗರು ಒತ್ತಾಯಿಸಿದರು.

ಟೀಕೆಗಳಿಗೆ ಪ್ರತಿಕ್ರಿಯಿಸಿದ ಜೊಮ್ಯಾಟೋ, “ಜಾಹೀರಾತುಗಳು ಒಳ್ಳೆಯ ಉದ್ದೇಶದಿಂದ ಕೂಡಿದ್ದವು. ಆದರೆ, ದುರಾದೃಷ್ಟವಶಾತ್ ಕೆಲವು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ” ಎಂದು ಹೇಳಿದೆ.

ಕಣ್ಣೀರು ತರಿಸುತ್ತೆ ಈ ಮೆಟರ್ನಿಟಿ ಫೋಟೋಶೂಟ್

ಜೊಮ್ಯಾಟೋ ಪ್ರಕಾರ, “ಈ ಜಾಹೀರಾತಿನ ಚಿತ್ರೀಕರಣದ ಉದ್ದೇಶವು, ಡೆಲಿವರಿ ಪಾಲುದಾರನನ್ನು ಹೈಲೈಟ್ ಮಾಡುವ ಗುರಿ ಹೊಂದಿತ್ತು. ಹಾಗೂ ಪ್ರತಿಯೊಬ್ಬ ಗ್ರಾಹಕರು ನಮಗೆ ಸ್ಟಾರ್ ಆಗಿದ್ದಾರೆ. ಗ್ರಾಹಕರು ಹೃತಿಕ್ ಹಾಗೂ ಕತ್ರೀನಾಗಿಂತ ಕಡಿಮೆಯಿಲ್ಲ” ಎಂದು ಕಂಪನಿ ಪುನರುಚ್ಚರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...