alex Certify ನೀರಿನಡಿ ತಲೆಕೆಳಗಾಗಿ ಕ್ಯಾಟ್ ​ವಾಕ್​; ವಿಡಿಯೋ ನೋಡಿ ಜನರಿಗೆ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನಡಿ ತಲೆಕೆಳಗಾಗಿ ಕ್ಯಾಟ್ ​ವಾಕ್​; ವಿಡಿಯೋ ನೋಡಿ ಜನರಿಗೆ ಅಚ್ಚರಿ

ಈಜುಗಾರ್ತಿಯೊಬ್ಬರು ತಲೆಕೆಳಗಾಗಿ ಕ್ಯಾಟ್​ ವಾಕ್​ ಮಾಡಿ ಗಮನಸೆಳೆದಿದ್ದಾರೆ.

ಈಜುಗಾರ್ತಿ ಕ್ರಿಸ್ಟಿನಾ ಮಕುಶೆಂಕೊ ಅವರು ಈಜು ಕೊಳದ ಕೆಳಭಾಗದಲ್ಲಿ ತಲೆಕೆಳಗಾಗಿ ಕ್ಯಾಟ್​ವಾಕ್​ ಮಾಡಿದ್ದು, ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದ್ದಾರೆ. ಇದು ಹೇಗೆ ಸಾಧ್ಯವಾಗುತ್ತದೆ ಎಂದು ನೆಟ್ಟಿಗರು ಚರ್ಚೆಯಲ್ಲಿ ತೊಡಗಿದ್ದಾರೆ.

ಸಾಮಾನ್ಯ ವ್ಯಕ್ತಿಯು ಭೂಮಿಯ ಮೇಲೆ ಸಹ ಮಾಡಲು ಹೆಣಗಾಡಬಹುದಾದ ಹಲವಾರು ಸಾಹಸಗಳನ್ನು ಆಕೆ ನೀರಿನ ಅಡಿಯಲ್ಲಿ ಮಾಡುತ್ತಾಳೆ. ಇತ್ತೀಚಿನ ವಿಡಿಯೊದಲ್ಲಿ, ಅವರು ಹೈ ಹೀಲ್ಸ್​ನಲ್ಲಿ ನೀರೊಳಗೆ ಕ್ಯಾಟ್​ವಾಕ್​ ಮಾಡುವುದನ್ನು ಕಾಣಬಹುದು.

ಗುರುತ್ವಾಕರ್ಷಣೆಯನ್ನು ಧಿಕ್ಕರಿಸುವ ಈ ಸಾಹಸದಲ್ಲಿ ಅವರು ನೀರಿನ ಮೇಲ್ಮೈಯನ್ನು- ನೀರಿನ ಅಡಿಯಲ್ಲಿ- ಕೊಳದಲ್ಲಿ ತುಳಿಯುತ್ತಿರುವಂತೆ ಕಾಣುತ್ತದೆ.

ನಂತರ ಆಕರ್ಷಕವಾಗಿ ಸುತ್ತಲೂ ತಿರುಗುತ್ತಾ ಕೊನೆಯಲ್ಲಿ ನೆಲದ ಮೇಲೆ ಬಹುತೇಕವಾಗಿ ನಡೆಯುವಂತೆ ಕಾಣಿಸಿಕೊಳ್ಳುವಾಗ ಅಚ್ಚರಿಯಾಗಿ ಕಾಣಿಸುತ್ತದೆ. ಅಲ್ಲದೇ ಸಾಹಸವನ್ನು ಸುಲಭವಾಗಿ ಅರ್ಥ ಮಾಡಿಸಲು ಒಂದು ಬ್ಯಾಗ್​ ಅನ್ನು ಒಯ್ಯುವುದು ವಿಶೇಷವೆನಿಸಿದೆ.

ನೀರೊಳಗಿನ ಮೂನ್​ವಾಕ್​ ಮಾಡಬಹುದು ಮತ್ತು ಅಲ್ಲಿ ಹಲವಾರು ರೀತಿಯ ದೈಹಿಕ ವ್ಯಾಯಾಮಗಳನ್ನು ಮಾಡಬಹುದು. ನೀರಿನ ಅಡಿಯಲ್ಲಿ ಸ್ಕಿಟ್​ಗಳನ್ನು ಮಾಡುವ ಮೂಲಕ ಈಜುಕೊಳದ ದೃಷ್ಟಿಕೋನವನ್ನು ಬದಲಾಯಿಸಲು ಆಕೆ ಬಯಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...