alex Certify ಮೊಣಕಾಲ ಕೆಳಗೆ ಪ್ಯಾಂಟ್​ ತೊಟ್ಟು ಕ್ಯಾಟ್ ​ವಾಕ್….! ಹೀಗೊಂದು ಫ್ಯಾಷನ್​ ಷೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಣಕಾಲ ಕೆಳಗೆ ಪ್ಯಾಂಟ್​ ತೊಟ್ಟು ಕ್ಯಾಟ್ ​ವಾಕ್….! ಹೀಗೊಂದು ಫ್ಯಾಷನ್​ ಷೋ

ಫ್ಯಾಷನ್​ ಎನ್ನುವುದು ಇವತ್ತಿನ ದಿನಗಳಲ್ಲಿ ವಿಚಿತ್ರ ರೂಪ ಪಡೆಯುತ್ತಿದೆ. ಪ್ಯಾಂಟ್​ ರಹಿತವಾಗಿ ಕ್ಯಾಟ್​ವಾಕ್​ ಮಾಡುವುದನ್ನು ನೋಡಿರುವಿರಿ. ಇನ್ನು ಕೆಲವು ಕಡೆಗಳಲ್ಲಿ ಲಲನೆಯರು ಹಾಕುವ ಡ್ರೆಸ್​ಗಳ ಬಗ್ಗೆಯಂತೂ ಹೇಳುವುದೇ ಬೇಡ. ಇದು ಫ್ಯಾಷನ್ನೋ, ಸಂಪೂರ್ಣ ದೇಹ ಪ್ರದರ್ಶನದ ಕಾರ್ಯಕ್ರಮವೋ ಎಂದು ತಿಳಿಯದಷ್ಟು ರೀತಿಯಲ್ಲಿ ಫ್ಯಾಷನ್​ ಷೋಗಳು ನಡೆಯುತ್ತವೆ.

ಹೆಣ್ಣುಮಕ್ಕಳಿಗಿಂತ ತಾವೇನು ಕಮ್ಮಿ ಎನ್ನುವಂಥ ಪುರುಷರ ಫ್ಯಾಷನ್​ ಷೋ ಒಂದರ ಕಾರ್ಯಕ್ರಮದ ವಿಡಿಯೋ ವೈರಲ್​ ಆಗಿದೆ. ಫ್ಯಾಷನ್ ಲೇಬಲ್ ಮೊವಾಲೋಲಾ ಕಂಪೆನಿ ಸದಾ ತನ್ನ ಚಮತ್ಕಾರಿ ಸಂಗ್ರಹವನ್ನು ಆಗಾಗ್ಗೆ ಪ್ರದರ್ಶಿಸುತ್ತಿದ್ದು, ಈ ವಾರದ ಆರಂಭದಲ್ಲಿ ಲಂಡನ್‌ನಲ್ಲಿ ಕೆಲವು ವಿಲಕ್ಷಣ ಡೆನಿಮ್‌ಗಳನ್ನು ಪ್ರದರ್ಶಿಸಿದೆ.

ಈ ವಿಡಿಯೋದಲ್ಲಿ ಜೀನ್ಸ್​ ಪ್ಯಾಂಟ್​ಗಳನ್ನು ಮೊಣಕಾಲಿಗಿಂತ ಕೆಳಗೆ ತೊಟ್ಟಿರುವ ಕೆಲವು ಯುವಕರು ತಮ್ಮ ಒಳ ಉಡುಪು ಪ್ರದರ್ಶಿಸುತ್ತಾ ರ್ಯಾಂಪ್​ವಾಕ್​ ಮಾಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ಥರಹೇವಾರಿ ಕಮೆಂಟ್​ಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...