alex Certify Viral Video | ಆಕಾಶದಲ್ಲಿ ಗಮನ ಸೆಳೆದ ಅಣಬೆ ಆಕಾರದ ಮೋಡ : ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಆಕಾಶದಲ್ಲಿ ಗಮನ ಸೆಳೆದ ಅಣಬೆ ಆಕಾರದ ಮೋಡ : ಬೆರಗಾದ ನೆಟ್ಟಿಗರು

ಅಣುಬಾಂಬ್​ ಸ್ಫೋಟಗೊಂಡ ರೀತಿಯ ಮೋಡದ ಆಕಾರದ ಚಂಡಮಾರುತವೊಂದು ಅಮೆರಿಕದ ಒಕ್ಲಹೋಮ ಎಂಬಲ್ಲಿ ಕಾಣಿಸಿಕೊಂಡಿದೆ. ಕಿತ್ತಳೆ ಬಣ್ಣದ ಈ ಮೋಡದ ಆಕೃತಿಯು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅನೇಕರು ಈ ಮೋಡ ಅಣಬೆ ಆಕಾರದಲ್ಲಿ ಇದೆ ಎಂದು ಹೇಳ್ತಿದ್ದಾರೆ.

ಪರಮಾಣು ಸ್ಫೋಟವಾದಾಗ ಯಾವ ರೀತಿಯ ಚಿತ್ರಣ ಇರುತ್ತದೆಯೋ ಈ ಮೋಡ ಕೂಡ ಅದೇ ರೀತಿಯ ಆಕಾರವನ್ನು ಹೊಂದಿದೆ. ನಾರ್ಮ್​ನಲ್ಲಿ ಕಂಡು ಬಂದ ಅತ್ಯದ್ಭುತ ಮೋಡದ ಆಕೃತಿಯಿದು ಎಂದು ಟ್ವಿಟರ್​ನಲ್ಲಿ ಈ ಮೋಡದ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಅಮೆರಿಕದ ಹವಾಮಾನ ಮುನ್ಸೂಚಕರು ನೀಡಿರುವ ಮಾಹಿತಿಯ ಪ್ರಕಾರ, ಇಲ್ಲಿ ಉಂಟಾದ ಚಂಡಮಾರುತದಿಂದಾಗಿ ಸೆಮಿನೋಲ್​ ಕೌಂಟಿ ಎಂಬಲ್ಲಿ ಬೇಸ್​ಬಾಲ್​ಗಳಿಗಿಂತಲೂ ದೊಡ್ಡದಾದ ಆಲಿಕಲ್ಲು ಮಳೆ ಉಂಟಾಗಿದೆ. ಇದರ ಜೊತೆಯಲ್ಲಿ ಇದೀಗ ಈ ಅಣಬೆ ಆಕಾರದ ಮೋಡ ಕೂಡ ಸಖತ್​ ಸದ್ದು ಮಾಡ್ತಿದೆ.

— WeatherNation (@WeatherNation) September 24, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...