alex Certify ಓಕ್ಲಹೋಮಾದ ಆಗಸದಲ್ಲಿ ಅಚ್ಚರಿ ಮೂಡಿಸಿದ ಹಸಿರು ಉಲ್ಕೆ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಕ್ಲಹೋಮಾದ ಆಗಸದಲ್ಲಿ ಅಚ್ಚರಿ ಮೂಡಿಸಿದ ಹಸಿರು ಉಲ್ಕೆ: ವಿಡಿಯೋ ವೈರಲ್​

ಓಕ್ಲಹೋಮಾ: ಅಮೆರಿಕದ ಓಕ್ಲಹೋಮಾ ಆಕಾಶದಲ್ಲಿ ಉಲ್ಕೆ ಬೀಳುವಂತೆ ತೋರುವ ಆಕಾಶ ಬೆಳಕಿನ ಚೆಂಡನ್ನು ಕ್ಯಾಮೆರಾ ಸೆರೆಹಿಡಿದಿವೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ದೃಶ್ಯಾವಳಿಗಳು ಆಕಾಶದಾದ್ಯಂತ ಬೆಳಕಿನ ಕಿರಣಗಳನ್ನು ನೋಡಬಹುದು.

ಫಾಕ್ಸ್ 23 ಹವಾಮಾನ ಶಾಸ್ತ್ರಜ್ಞರಾದ ಲಾರಾ ಮಾಕ್ ಅವರು ಟ್ವಿಟ್ಟರ್‌ನಲ್ಲಿ ಡ್ಯಾಶ್‌ಕ್ಯಾಮ್ ವೀಡಿಯೊವನ್ನು ಶೇರ್​ ಮಾಡಿಕೊಂಡಿದ್ದಾರೆ. ಆಕಾಶದಲ್ಲಿ ಚಲಿಸುವಾಗ ಪ್ರಕಾಶಮಾನವಾದ ಹಸಿರು ಉರಿಯನ್ನು ಕ್ಯಾಮೆರಾ ಸೆರೆ ಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯು ಸಂಪೂರ್ಣವಾಗಿ ಡೋರ್‌ಬೆಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್​ ಆಗಿದೆ. ಇದು ಪ್ರಪಂಚದಾದ್ಯಂತ  ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸುತ್ತಿದೆ. ಇದನ್ನು ನೋಡಿದ ನೀವೆ ಧನ್ಯರು ಎಂದು ಹಲವರು ಹೇಳಿಕೊಂಡಿದ್ದಾರೆ. ಈ ಅದ್ಭುತ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಇಂಥ ಹಲವಾರು ಅದ್ಭುತಗಳು ಆಕಾಶದಲ್ಲಿ ನಡೆಯುತ್ತಲೇ ಇರುತ್ತವೆ. ಅವುಗಳ ಹೆಚ್ಚಿನ ಅಧ್ಯಯನ ಅಗತ್ಯ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...