alex Certify ಮಳೆ ನಿಲ್ಲುವುದನ್ನು ಕಾಯುತ್ತಾ ʼಫುಟ್‌ವಾಲಿʼ ಆಡಿದ ಭಾರತ-ನ್ಯೂಜಿಲೆಂಡ್​ ಕ್ರಿಕೆಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆ ನಿಲ್ಲುವುದನ್ನು ಕಾಯುತ್ತಾ ʼಫುಟ್‌ವಾಲಿʼ ಆಡಿದ ಭಾರತ-ನ್ಯೂಜಿಲೆಂಡ್​ ಕ್ರಿಕೆಟಿಗರು

ವೆಲ್ಲಿಂಗ್ಟನ್‌: ವೆಲ್ಲಿಂಗ್ಟನ್‌ನಲ್ಲಿ ಕಳೆದ ಶುಕ್ರವಾರ ನಡೆಯಬೇಕಿದ್ದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಯಿತು. ಸಮಯವನ್ನು ಕಳೆಯುವ ಸಲುವಾಗಿ, ಎರಡೂ ತಂಡಗಳ ಆಟಗಾರರು ಈ ನಡುವೆ ಮೋಜಿನ “ಫುಟ್‌ವಾಲಿ” ಪಂದ್ಯ ಆಡುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಬಿಸಿಸಿಐನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ಆಟಗಾರರು ಆಟವನ್ನು ಆನಂದಿಸುತ್ತಿದ್ದಾರೆ ಎಂದು ಕ್ಯಾಪ್ಷನ್​ ನೀಡಲಾಗಿದೆ. ಈ ವಿಡಿಯೋದಲ್ಲಿ ಚಾಹಲ್, ಸಂಜು ಸ್ಯಾಮ್ಸನ್ ಮತ್ತು ಇಶ್ ಸೋಧಿ ಸೇರಿದಂತೆ ಕೆಲ ಆಟಗಾರರು “ಫುಟ್‌ವಾಲಿ” ಯ ಮೋಜಿನ ಪಂದ್ಯ ಆಡುವುದನ್ನು ನೋಡಬಹುದಾಗಿದೆ.

“# ಟೀಮ್‌ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಫುಟ್‌ವಾಲಿ ಆಟವನ್ನು ಆನಂದಿಸಿ ನಾವು ಮಳೆ ಬಿಡುವವರೆಗೆ ಕಾಯುತ್ತಿದ್ದೇವೆ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ಕ್ರಿಕೆಟ್ ತಂಡವು ಇಂದು (ಭಾನುವಾರ) ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ (IND vs NZ 2022) ವಿರುದ್ಧ ಸೆಣಸಲಿದೆ. ಸರಣಿಯ ಮೊದಲ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿರುವ ಕಾರಣ ಎರಡನೇ ಟಿ20 ಪಂದ್ಯ ಉಭಯ ತಂಡಗಳಿಗೂ ಮಹತ್ವ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸರಣಿ ಸೋಲನ್ನು ತಪ್ಪಿಸಲಿದೆ. ಆದರೆ, ಎರಡನೇ ಟಿ20 ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದ್ದು, ಏನಾಗುತ್ತದೆಯೋ ಕಾದು ನೋಡಬೇಕಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...